Advertisement

ಥ್ರಿಲ್‌ ನೀಡುವ ಹೊಸಬರ ವೇಷ

11:34 AM Feb 19, 2022 | Team Udayavani |

ವ್ಯಕ್ತಿಯೊಬ್ಬನಿಗೆ ಇರುವ ಧೈರ್ಯ ಆತನನ್ನು ಹತ್ತಾರು ಸಾಹಸಗಳಿಗೆ ಪ್ರೇರೇಪಿಸಬಹುದು. ಹಾಗೆಯೇ, ಆತನಲ್ಲಿರುವ ಭಯ (ಫೋಬಿಯಾ) ಕೂಡ ಹತ್ತಾರು ದುಸ್ಸಾಹಸಗಳಿಗೆ ಪ್ರೇರೇಪಿಸ ಬಹುದು! ಅದು ಹೇಗಿರುತ್ತದೆ ಅನ್ನೋದು ಈ ವಾರ ತೆರೆಗೆ ಬಂದಿರುವ “ಬಹುಕೃತ ವೇಷಂ’ ಚಿತ್ರದ ಕಥಾಹಂದರ.

Advertisement

ಅಪರೂಪವೆನಿಸುವ ಡಿಲೇರಿಯಂ ಫೋಬಿಯಾ (ಚಿತ್ತ ಕಲ್ಪಿತ ಭಯ) ಎಂಬ ಮಾನಸಿಕ ಖಾಯಿಲೆಯಿಂದ ಬಳಲುವ ನಾಯಕ ಅತಿಶಯ್‌ (ಶಶಿಕಾಂತ್‌)ಗೆ ಈ ಫೋಬಿಯಾ (ಭಯ) ಹೇಗೆಲ್ಲ ಶತ್ರುವಾಗಬಲ್ಲದು, ಇದರಿಂದ ಆತ ಹೇಗೆಲ್ಲ ಬಳಲಿ-ಬೆಂಡಾಗುತ್ತಾನೆ. ಇಂಥ ದೌರ್ಬಲ್ಯ ತಿಳಿದವರು ಆತನನ್ನು ಹೇಗೆಲ್ಲ “ವೇಷ’ಬದಲಾಯಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ “ಬಹು’ ವಿಧವಾಗಿ ಬಳಸಿಕೊಳ್ಳುತ್ತಾರೆ, ಎನ್ನುವುದರ ಸುತ್ತ “ಬಹುಕೃತ ವೇಷಂ’ ಸಿನಿಮಾ ಸಾಗುತ್ತದೆ.

ಅದರ ಪರಿಣಾಮಗಳೇನು ಅನ್ನೋದನ್ನ ಸಿನಿಮಾದಲ್ಲಿಯೇ ನೋಡುವುದು ಒಳ್ಳೆಯದು. ಕನ್ನಡದ ಮಟ್ಟಿಗೆ ಹೊಸದೆನಿಸುವ ಇಂಥದ್ದೊಂದು ಸಬ್ಜೆಕ್ಟ್ ತೆರೆಮೇಲೆ ತಂದಿರುವ ಚಿತ್ರ ತಂಡದ ಪ್ರಯತ್ನ ಪ್ರಶಂಸನಾರ್ಹ. ಮೊದಲಾರ್ಧ ಒಂದು ಆಯಾಮದಲ್ಲಿ ಸಾಗುವ ಚಿತ್ರಕಥೆ, ದ್ವಿತೀಯಾರ್ಧದಲ್ಲಿ ಮತ್ತೂಂದು ಆಯಾಮ ಪಡೆದು ಕೊಳ್ಳುತ್ತದೆ. ಆದರೆ ಚಿತ್ರಕಥೆ ಮತ್ತು ನಿರೂಪಣೆಯಲ್ಲಿಸಾಕಷ್ಟು ಟರ್ನ್ಸ್, ಟ್ವಿಸ್ಟ್‌ ಇರುವುದರಿಂದ, ಕೆಲವುಸನ್ನಿವೇಶಗಳಲ್ಲಿ ಪ್ರೇಕ್ಷಕರು ಲಾಜಿಕ್‌ ಹುಡುಕುವ ಮೊದಲೇ ಮತ್ತೂಂದು ಟರ್ನ್, ಟ್ವಿಸ್ಟ್‌ ಎದುರಾಗಿರುತ್ತದೆ. ಚಿತ್ರಕಥೆಗೆ ತಕ್ಕಂತೆ ಸಂಭಾಷಣೆ ಮೊನಚಾ ಗಿದೆ. ಕೆಲ ದೃಶ್ಯಗಳಿಗೆ ಅಲ್ಲಲ್ಲಿ ಕತ್ತರಿ ಬಿದ್ದಿದ್ದರೆ, “ಬಹುಕೃತ ವೇಷಂ’ ಇನ್ನಷ್ಟುಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ಶಶಿಕಾಂತ್‌ ಮತ್ತು ವೈಷ್ಣವಿಇಬ್ಬರದ್ದೂ ಪೈಪೋಟಿ ನೀಡುವ ಅಭಿನಯ.ಎರಡು ವಿಭಿನ್ನ ಶೇಡ್‌ನ‌ ಪಾತ್ರಗಳನ್ನು ನಾಯಕಶಶಿಕಾಂತ್‌, ಸಮರ್ಥವಾಗಿ ನಿಭಾಯಿಸಿದ್ದಾರೆ.ಎರಡು ಥರದ ಮ್ಯಾನರಿಸಂ, ಆ್ಯಕ್ಷನ್‌, ಡ್ಯಾನ್ಸ್‌, ಡೈಲಾಗ್‌ ಡೆಲಿವರಿ ಎಲ್ಲದರಲ್ಲೂ ಶಶಿಕಾಂತ್‌ಪ್ರತಿಭೆ ಅನಾವರಣವಾಗಿದೆ. ನಾಯಕನ ಪಾತ್ರಕ್ಕೆ ಎದುರಾಗುವ ಪಾತ್ರದಲ್ಲಿ ವೈಷ್ಣವಿ ಹಾಗೂ ಖಳನಟನ ಪಾತ್ರದಲ್ಲಿ ಕರಣ್‌ ಆರ್ಯ ಅವರದ್ದುಕೂಡ ನೋಡುಗರ ಗಮನ ಸೆಳೆಯುವಂಥ ಅಭಿನಯ. ಉಳಿದ ಪಾತ್ರಗಳು ಹಾಗೆ ಬಂದು,ಹೀಗೆ ಹೋಗುವುದರಿಂದ ಅವುಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಚಿತ್ರದ ಹಾಡುಗಳು ಕೂಡ ಗುನುಗುವಂತಿದೆ. ಹಿನ್ನೆಲೆ ಸಂಗೀತ, ಸಂಕಲನ, ಕಲರಿಂಗ್‌ ಮತ್ತಿತರ ತಾಂತ್ರಿಕ ಕೆಲಸಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನನೀಡಬಹುದಿತ್ತು. ಕೆಲ ಸಣ್ಣಪುಟ್ಟ ಲೋಪಗಳನ್ನುಬದಿಗಿಟ್ಟು ನೋಡುವುದಾದರೆ, “ಬಹುಕೃತ ವೇಷಂ’ ಒಂದೊಳ್ಳೆ ಪ್ರಯತ್ನವಾಗಿದ್ದು, ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ

Advertisement

…………………………………………………………………………………………………………………….

ಚಿತ್ರ: ಬಹುಕೃತ ವೇಷಂ

ರೇಟಿಂಗ್‌:  ***

ನಿರ್ಮಾಣ: ಹೆಚ್‌. ನಂದ, ಡಿ.ಕೆ ರವಿ

ನಿರ್ದೇಶನ: ಪ್ರಶಾಂತ್‌ ಕೆ. ಎಳ್ಳಂಪಳ್ಳಿ

ತಾರಾಗಣ: ಶಶಿಕಾಂತ್‌, ವೈಷ್ಣವಿ ಗೌಡ,ಕರಣ್‌ ಆರ್ಯ, ರಾಕೇಶ್‌ ಪೂಜಾರಿ ಮತ್ತಿತರರು

Advertisement

Udayavani is now on Telegram. Click here to join our channel and stay updated with the latest news.

Next