ಜೀವನದಲ್ಲಿ ನಾವು ಎಷ್ಟೋ ಸಲ ಅನ್ಕೊಂಡು ಇರ್ತೀವಿ ನನಗೆ ಮಾತ್ರ ಯಾವಾಗಲೂ ಕಷ್ಟ ಅಂತ ಆದ್ರೆ ಈ ಚಲನಚಿತ್ರ ನೋಡಿದ್ರೆ ಒಮ್ಮೆ ಯಾರಿಗಾದರೂ ಅನ್ಸುತ್ತೆ ನಮ್ಮದೆಲ್ಲ ಎಂತ ಕಷ್ಟ ಅಂತ. ಎರಡು ವರ್ಷ ಬೇರೊಬ್ಬ ಮನುಷ್ಯನನ್ನು ನೋಡದೆ ಬರೀ ಆಡುಗಳ ಜತೆ ಸಮಯ, ದಿನ ಏನೂ ತಿಳಿಯದೆ ಹಗಲು ರಾತ್ರಿ ಮಾತ್ರ ಗೊತ್ತಿದ್ದು ಮರಳುಗಾಡಿನ ಮರುಭೂಮಿಯ ಮಧ್ಯೆ ಇರಿ ಅಂದ್ರೆ ನಿಮ್ಮಿಂದ ಸಾಧ್ಯನ?
ಆಡು ಜೀವಿದಂ ಅಥವಾ ದ ಗೋಟ್ ಲೈಫ್, ಮಾ.28ರಂದು ಭಾರತದಾದ್ಯಂತ ಒಂದು ಮನ ಕರಗಿಸುವ ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾಗಿದೆ.
ಹಾಗಾದ್ರೆ ಏನದು ಈ ಚಿತ್ರದ ಕಥೆ? ಒಂದಲ್ಲ ಎರಡಲ್ಲ ಸತತ 16 ವರ್ಷಗಳಿಂದ ಒಂದು ಚಲನಚಿತ್ರದ ಸ್ಟೋರಿ ರೆಡಿಯಾಗಿ ಅದು ಬಿಡುಗಡೆ ಆಗುತ್ತೆ ಅಂದ್ರೆ ಅದು ನಿಜಕ್ಕೂ ಊಹಿಸಲಾಗದ ಸಂಗತಿ.
ಮೊದಲಿಗೆ ಈ ಚಿತ್ರದ ಬಗ್ಗೆ ಹೇಳಬೇಕಾದರೆ ಇದೊಂದು ನಿಜ ಘಟನೆ. ಮೋಸದಿಂದ ಮರಳು ಭೂಮಿಗೆ ಹೋದಂತಹ ಮೊಹಮ್ಮದ್ ನಜೀಬ್ ನ ಕಥೆಯೇ ಆಡು ಜೀವಿದಂ.
ಇನ್ನು ಬ್ಲೆಸ್ಸಿಯಾ ಡೈರೆಕ್ಷನ್ ಬಗ್ಗೆ ಎರಡು ಮಾತಿಲ್ಲ, ವಿ ಎಫ್ ಎಕÕ… ಆಗ್ಲಿ ಮೇಕಪ್, ಕಾಸ್ಟ್ಯೂಮ್, ಎ.ಆರ್. ರೆಹಮನ್ ಮ್ಯೂಸಿಕ್, ಬಗ್ಗೆ ನಿಜಕ್ಕೂ ಹೇಳಲೇ ಬೇಕು. ಒಂದೊಂದು ಘಟನೆಯು ನೋಡುಗರಿಗೆ ರೋಮಾಂಚನ ನೀಡುತ್ತದೆ.
ಒಬ್ಬ ವ್ಯಕ್ತಿ ಕಳೆದು ಹೋದಂತಹ ಘಟನೆ ಇದು. ಇದೇ ರೀತಿ ಅನೇಕ ವ್ಯಕ್ತಿಗಳು ಬೇರೆ ಬೇರೆ ರಾಜ್ಯ ದೇಶದಲ್ಲಿ ಅನೇಕ ರೀತಿಯಲ್ಲಿ ಕಷ್ಟಪಟ್ಟಿರುತ್ತಾರೆ. ನಿಜಕ್ಕೂ ಪ್ರತಿಯೊಬ್ಬರು ನೋಡಲೇಬೇಕಾದಂತಹ ಒಂದು ಸಿನೆಮಾದ ಇದು.
ಜೀವನದ ಕಷ್ಟ ನೀಗಲೂ ತನ್ನ ಸ್ವಂತ ಜಾಗ ಮಾರಿ ಹೊರದೇಶಕ್ಕೆ ಹೋದ ವ್ಯಕ್ತಿಯ ಕಥೆ ಎಲ್ಲಿಯವರೆಗೆ ಹೋಯಿತು ಎಂದು ನಾವು ಈ ಚಲನಚಿತ್ರದಲ್ಲಿ ನೋಡಬಹುದು.ಜನರಿಗೆ ಇಂದು ಇವರ ಕಥೆ ತಿಳಿಯಿತು,ಇನ್ನೂ ಅದೆಷ್ಟೋ ಕಥೆ ಹಾಗೆಯೇ ಉಳಿದಿದೆ.
-ಸ್ನೇಹ ವರ್ಗೀಸ್
ಎಂಜಿಎಂ ಕಾಲೇಜು, ಉಡುಪಿ.