ಚೆನ್ನೈ: ರಷ್ಯಾದ ಮಾಸ್ಕೋದಲ್ಲಿ ನಡೆಯಬೇಕಿದ್ದ 44ನೇ ವಿಶ್ವ ಚೆಸ್ ಒಲಿಂಪಿ ಯಾಡ್ ಭಾರತಕ್ಕೆ ಸ್ಥಳಾಂತರಗೊಂಡಿದೆ. ಈ ವರ್ಷಾಂತ್ಯ ಚೆನ್ನೈಯಲ್ಲಿ ನಡೆಯಲಿದೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಪರಿಣಾಮವಾಗಿ ಈ ಪ್ರತಿಷ್ಠಿತ ಟೂರ್ನಿಯ ಆತಿಥ್ಯದಿಂದ ರಷ್ಯಾ ವಂಚಿತವಾಯಿತು.
“ಭಾರತದ ಚೆಸ್ ರಾಜಧಾನಿ ಚೆನ್ನೈ 44ನೇ ಚೆಸ್ ಒಲಿಂಪಿಯಾಡ್ ಆತಿಥ್ಯ ವಹಿಸುತ್ತಿರುವುದಕ್ಕೆ ಸಂತಸವಾಗಿದೆ. ಇದು ತಮಿಳುನಾಡು ಪಾಲಿನ ಹೆಮ್ಮೆಯ ಸಂಗತಿ. ವಿಶ್ವ ಚೆಸ್‌ನ ಎಲ್ಲ ರಾಜ, ರಾಣಿಯರನ್ನು ಚೆನ್ನೈಆತ್ಮೀಯವಾಗಿ ಸ್ವಾಗತಿಸುತ್ತಿದೆ’ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಈ ಆತಿಥ್ಯವನ್ನು ವಹಿಸಿಕೊಳ್ಳುವ ಸಲುವಾಗಿ ಆಲ್ ಇಂಡಿಯಾ ಚೆಸ್ ಫೆಡರೇಶನ್ ವಾರದ ಹಿಂದೆ 10 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಮುಂಗಡವಾಗಿ ಪಾವತಿಸಿತ್ತು.
ಚೆಸ್ ಒಲಿಂಪಿಯಾಡ್ ಎರಡು ವರ್ಷಗಳಿಗೊಮ್ಮೆ ನಡೆಯುವ ಕೂಟವಾಗಿದ್ದು, ಸುಮಾರು 190 ದೇಶಗಳ ತಂಡಗಳು ಎರಡು ವಾರಗಳ ಕಾಲ ಸ್ಪರ್ಧಿಸುತ್ತವೆ.