Advertisement

ಕಡಿಮೆ ಖರ್ಚಿನ ಗಾಲಿ ಮೇಲಿನ ಸಂಚಾರಿ ಮನೆ: ನಿರ್ಗತಿಕರಿಗೆ ಹಂಚುತ್ತಿರುವ ವಿಜಯಪುರದ ಕಲ್ಲಪ್ಪ

06:52 PM Mar 31, 2020 | keerthan |

ವಿಜಯಪುರ: ಕೋವಿಡ್-19 ವೈರಸ್ ಹರಡುವಿಕೆ ನಿಗ್ರಹಿಸಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಸೂರು ರಹಿತರಿಗೆ ಇದು ಸಮಸ್ಯೆ ತಂದೊಡ್ಡಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರದ ವ್ಯಕ್ತಿಯೊಬ್ಬರು ಸೂರಿಲ್ಲದವರಿಗೆ ಗಾಲಿಗಳ ಮೇಲೆ ಸಂಚರಿಸುವ ತಗಡಿನ ಮನೆಗಳನ್ನು ಹಂಚಲು ಮುಂದಾಗಿದ್ದಾರೆ.

Advertisement

ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆ ಸಂಸ್ಥಾಪಕ ಕಲ್ಲಪ್ಪ ಕಡೇಚೂರ ಈಗಾಗಲೇ ಇಂಥ ಹಲವು ಮನೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಿರ್ಗತಿಕರಿಗೆ ಹಂಚಿಕೆ ಮಾಡಿದ್ದಾರೆ. ಲಾಕ್‍ಡೌನ್ ಬಳಿಕ ಸೂರಿಲ್ಲದ ಜನರಿಗೆ ತಾವು ರೂಪಿಸಿರುವ 6*8 ಅಡಿ ಚದರ ಅಡಿಯ ಗಾಲಿ ಮೇಲೆ ಸಂಚರಿಸುವ ಮನೆಗಳನ್ನು ತಯಾರಿಸಿ ವಿತರಣೆಗೆ ಮುಂದಾಗಿದ್ದಾರೆ.

ಮಂಗಳವಾರ ನರಗದಲ್ಲಿ ಸೂರಿಲ್ಲ ಚನ್ನಪ್ಪ ಪೂಜಾರಿ ಎಂಬವರಿಗೆ ತಮ್ಮ ಪರಿಕಲ್ಪನೆಯ ಮನೆಯನ್ನು ವಿತರಿಸಿ ಮಾತನಾಡಿದ ಕಲ್ಲಪ್ಪ ಕಡೇಚೂರ, ಕೇವಲ 15-25 ಸಾವಿರ ರೂ. ವೆಚ್ಚದಲ್ಲಿ ಗಾಲಿಮೇಲೆ ಸಂಚರಿಸುವ ಮನೆಗಳನ್ನು ನಿರ್ಮಿಸಬಹುದು. ಅದರಲ್ಲೂ ಅಲೆಮಾರಿ ಸಮುದಾಯದ ಸೂರಿಲ್ಲದ ಜನರಿಗೆ ಕೋವಿಡ್-19 ರೋಗ ಹರಡುವಿಕೆ ತಡೆಯುವ ಈ ಹಂತದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ಹೇಳುತ್ತಾರೆ.

ಇದಲ್ಲದೇ ಸಿಂದಗಿ ರಸ್ತೆಯ ಮಂಗಳವಡೆ ಪೇಟ್ರೋಲ್ ಪಂಪ್ ಎದುರು ದೀಪಕ್ ಇಂಜಿನಿಯರಿಂಗ್ ವರ್ಕ ಬಳಿ ಇನ್ನೂಬ್ಬರು ಸೂರು ರಹಿತರಿಗೆ ಗಾಲಿ ಮೇಲಿನ ಸಂಚಾರಿ ಮನೆ ಹಂಚಲಾಗುವುದು ಎಂದರು.

ಸಮಾನ ಮನಸ್ಕರು ತಮ್ಮೊಂದಿಗೆ ಕೈ ಜೋಡಿಸಿದರೆ ಸೂರಿಲ್ಲದ ಬಡವರಿಗೆ ಇಂಥ ಮನೆಗಳನ್ನು ವಿತರಿಸಲು ನೆರವಾಗಲಿದೆ ಎಂದು ಕಲ್ಲಪ್ಪ ಆಶಯ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next