Advertisement

Hyderabad; ಹಾಸ್ಟೆಲ್‌ ಮೆಸ್‌ನಲ್ಲಿನ ಚಟ್ನಿ ಪಾತ್ರೆಯಲ್ಲಿ ಈಜಾಡಿದ ಇಲಿ!

09:36 PM Jul 09, 2024 | Team Udayavani |

ಹೈದರಾಬಾದ್‌: ಹಾಸ್ಟೆಲ್‌ ಮೆಸ್‌ನಲ್ಲಿ ತಯಾರಿಸಲಾದ ಚಟ್ನಿಯಲ್ಲಿ ಇಲಿ ಈಜಾಡುತ್ತಿದ್ದ ಘಟನೆ ಹೈದರಾಬಾದ್‌ನ ಸುಲ್ತಾನ್‌ಪುರದ ಜವಾಹರ್‌ಲಾಲ್‌ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

Advertisement

ಇಲಿ ಚಟ್ನಿಯೊಳಗೆ ಈಜಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಜತೆಗೆ ನೆಟ್ಟಿಗರು ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆಯೆತ್ತಿದ್ದಾರೆ. ವೈರಲ್‌ ಆದ ವಿಡಿಯೋವನ್ನು ಹಾಸ್ಟೆಲ್‌ನ ವಿದ್ಯಾರ್ಥಿಗಳು ಚಿತ್ರೀಕರಿಸಿದ್ದು, ಚಟ್ನಿಯಿದ್ದ ದೊಡ್ಡ ಪಾತ್ರೆಯೊಳಗೆ ಇಲಿ ಈಜಾಡುತ್ತಿದೆ.

ಚಟ್ನಿಯಿದ್ದ ಪಾತ್ರೆಯನ್ನು ಮುಚ್ಚಿರದ ಕಾರಣ ಅದರೊಳಗೆ ಇಲಿ ಬಿದ್ದಿದೆ ಎನ್ನಲಾಗಿದ್ದು, ಈ ಘಟನೆಯಿಂದ ಹಾಸ್ಟೆಲ್‌ನ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next