Advertisement

ಮೌಂಟ್‌  ಎವರೆಸ್ಟ್‌ನಲ್ಲಿದೆ ಸೂಕ್ಷ್ಮಾಣು ಜಗತ್ತು!

02:21 AM Mar 17, 2023 | Team Udayavani |

ಕಠ್ಮಂಡು: ಮೌಂಟ್‌ ಎವರೆಸ್ಟ್‌ ಎಂದಾಕ್ಷಣ ನಮಗೆಲ್ಲರಿಗೂ ಹತ್ತಿಯುಂ ಡೆಯಂಥ ಹಿಮರಾಶಿ, ಮನ ಮೋಹಕವಾಗಿ ಬೆಳೆದು ನಿಂತ ಶಿಖರ, ಅದನ್ನು ಹತ್ತುವವರ ಥ್ರಿಲ್‌ ಕಣ್ಣಮುಂದೆ ಬರುತ್ತದೆ. ಆದರೆ, ಇವೆಲ್ಲದರ ಹೊರತಾಗಿ ಎವರೆಸ್ಟ್‌ ಶಿಖರವು ಮಾರಣಾಂತಿಕವಾದ ಸೂಕ್ಷ್ಮಾಣುಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ ಎಂದರೆ ನಂಬುತ್ತೀರಾ?

Advertisement

ನಂಬಲೇಬೇಕು. ಹೊಸ ಅಧ್ಯಯನವೊಂದು ಈ ಕುರಿತ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಪ್ರತೀ ವರ್ಷವೂ ಹಲವಾರು ಪರ್ವತಾರೋಹಿಗಳು ಎವರೆಸ್ಟ್‌ ಶಿಖರವನ್ನು ಏರುತ್ತಾರೆ. ಈ ವೇಳೆ ಅವರು ಸೀನುವಾಗ, ಕೆಮ್ಮುವಾಗ ಅವರ ದೇಹದಿಂದ ಹೊರಕ್ಕೆ ಹಾರುವ ಸೂಕ್ಷ್ಮಾಣುಗಳು ಎವರೆಸ್ಟ್‌ನ ಹಿಮದಲ್ಲಿ ಹುದುಗಿಹೋಗುತ್ತವೆ. ಇವುಗಳು ಹಲವು ಶತಮಾನಗಳ ಕಾಲ ಮಂಜುಗಡ್ಡೆಯೊಳಗೆ ಭದ್ರವಾಗಿ ಉಳಿದಿರುತ್ತವೆ ಎನ್ನುತ್ತದೆ ಅಧ್ಯಯನ ವರದಿ.

ಅತ್ಯಾಧುನಿಕ ವಂಶವಾಹಿ ಪತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧಕರು ಮೌಂಟ್‌ ಎವರೆಸ್ಟ್‌ನ ಮಣ್ಣನ್ನು ಪರೀಕ್ಷಿಸಿದ್ದಾರೆ. ಅದರಲ್ಲಿದ್ದ ಬಹುತೇಕ ಎಲ್ಲ ಸಜೀವ ಅಥವಾ ನಿರ್ಜೀವ ಸೂಕ್ಷ್ಮಾಣುಜೀವಿಗಳ ಡಿಎನ್‌ಎಗಳನ್ನು ಪತ್ತೆಹಚ್ಚಿದ್ದಾರೆ. ಅವುಗಳು ಎಷ್ಟೋ ಶತಮಾನಗಳ ಕಾಲ ಸದ್ದಿಲ್ಲದೇ ಮಂಜಿನ ಹೊದಿಕೆ ಹೊದ್ದು ಮಲಗಿರುತ್ತವೆ ಎಂದೂ ಸಂಶೋಧಕರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next