ನೇಪಾಲದ ದಾಖಲೆಗಳಲ್ಲಿ ಇರುವುದಕ್ಕಿಂತ ಮೌಂಟ್ ಎವರೆಸ್ಟ್ 4 ಮೀ. ಕಡಿಮೆ ಎತ್ತರವಿದೆ ಎಂದು ಚೀನ ಹೇಳಿದೆ. 2015ರಲ್ಲಿ ಸಂಭವಿಸಿದ ಭಾರೀ ಭೂಕಂಪನದ ಪ್ರಭಾವದಿಂದ ಶಿಖರದ ಎತ್ತರ ತಗ್ಗಿರಬೇಕೆಂದು ಅಂದಾಜಿಸಲಾಗಿದೆ.
Advertisement
ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಋತುವಿನಲ್ಲಿ ಎವರೆಸ್ಟ್ ಪರ್ವತವೇರಲು ಚೀನ ತನ್ನ ತಂಡಕ್ಕೆ ಮಾತ್ರ ಅನುಮತಿ ನೀಡಿತ್ತು. ನೇಪಾಲ ಎಲ್ಲ ಯಾತ್ರೆಗಳನ್ನೂ ರದ್ದುಗೊಳಿಸಿತ್ತು. ಎಪ್ರಿಲ್ ತಿಂಗಳಲ್ಲಿ ಚೀನದ ತಂಡ ಪರ್ವತಾರೋಹಣ ಆರಂಭಿಸಿತ್ತು. ಪ್ರತಿಕೂಲ ಹವಾಮಾನ ಅವರಿಗೆ ಸಾಕಷ್ಟು ತಡೆಯನ್ನೂ ಒಡ್ಡಿತ್ತು. ಮಂಗಳವಾರ ಬಹು ಪ್ರಯಾಸದಿಂದ ಶಿಖರವೇರಿದ ತಂಡ ಅಲ್ಲಿ ತನ್ನ ಸರ್ವೆಯ ಗುರುತನ್ನು ನೆಟ್ಟಿದೆ. ಚೀನದ ಸೆಂಟ್ರಲ್ ಟೆಲಿವಿಷನ್ ಈ ದೃಶ್ಯಾವಳಿಯನ್ನು ನೇರ ಪ್ರಸಾರ ಮಾಡಿತ್ತು. ಹವಾಮಾನ ವೈಪರೀತ್ಯ ಹಾಗೂ ಆಮ್ಲಜನಕ ಕೊರತೆ ಕಾರಣದಿಂದ ಇಬ್ಬರು ವೃತ್ತಿಪರ ಸರ್ವೇಯರ್‌ಗಳು ಕೊನೆಯ ಹಂತವನ್ನು ಏರಲಿಲ್ಲ. 1960ರಲ್ಲೂ ಚೀನಿ ತಂಡ ಮಾತ್ರ ಶಿಖರವನ್ನು ತಲುಪಿದ ದಾಖಲೆಯಿದೆ.