Advertisement

ಪ್ರಚೋದನೆ ಸಾಬೀತಾಗಬೇಕು: ಸುಪ್ರೀಂ ಕೋರ್ಟ್‌

01:44 AM Oct 04, 2020 | mahesh |

ಹೊಸದಿಲ್ಲಿ: “”ಒಬ್ಬ ವ್ಯಕ್ತಿಯ ಆತ್ಮಹತ್ಯೆಯ ಹಿಂದೆ ಬೇರೊಬ್ಬ ವ್ಯಕ್ತಿಯ ಪ್ರಚೋದನೆಯೇ ಕಾರಣ ಎಂಬುದನ್ನು ಆ ಪ್ರಕರಣದ ತನಿಖಾ ವರದಿಯಲ್ಲಾಗಲೀ ಅಥವಾ ವಿಚಾರಣೆ ಹಂತದಲ್ಲಾಗಲೀ ಸಾಬೀತುಪಡಿಸಬೇಕು” ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ.

Advertisement

1997ರಲ್ಲಿ ಸಂಭವಿಸಿದ್ದ ಪಂಜಾಬ್‌ನ ವಿವಾಹಿತ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣವೊಂದರಲ್ಲಿ ಆಕೆಯ ಪತಿಯೇ ಆತ್ಮಹತ್ಯೆಗೆ ಪರೋಕ್ಷವಾಗಿ ಪ್ರಚೋದನೆ ನೀಡಿದ್ದಾರೆಂದು ಪರಿಗಣಿಸಿದ್ದ ಪಂಜಾಬ್‌ನ ಕೆಳ ನ್ಯಾಯಾಲಯ ಹಾಗೂ ಅಲ್ಲಿನ ಹೈಕೋರ್ಟ್‌ ಗುರುಚರಣ್‌ ಸಿಂಗ್‌ ಎಂಬವರಿಗೆ ಜೈಲು ಶಿಕ್ಷೆ ವಿಧಿಸಿತ್ತು.

ಆದರೆ, ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ, “”ಅಪರಾಧದ ಹಿಂದೆ ಪ್ರಚೋದನೆಯ ಪಾತ್ರವನ್ನು ಕೇವಲ ಮೇಲ್ನೋಟಕ್ಕೆ ಊಹಿಸುವುದು ಸಲ್ಲದು. ಆ ಪ್ರಚೋದನೆಯ ಕಾರಣ, ಪ್ರಕರಣದ ತನಿಖೆಯಲ್ಲಾಗಲೀ, ನ್ಯಾಯಾಲಯದ ವಿಚಾರಣೆಯಲ್ಲಾಗಲೀ ಸೂಕ್ತ ಸಾûಾ$Âಧಾರಗಳ ಮೂಲಕ ಸಾಬೀತಾಗಬೇಕು” ಎಂದು ಹೇಳಿರುವುದಲ್ಲದೆ, ಗುರುಚರಣ್‌ ಸಿಂಗ್‌ ಅವರನ್ನು ಖುಲಾಸೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next