Advertisement

ಬದುಕಿನ ಪರಿವರ್ತನೆಗೆ ಪ್ರವಚನ ಪ್ರೇರಣೆ: ಬಸವಪ್ರಭು ಶ್ರೀ

03:11 PM Jul 25, 2017 | |

ದಾವಣಗೆರೆ: ಸಾರ್ಥಕ ಜೀವನದ ಸದ್ವಿಚಾರದ ವಿಚಾರ ತಿಳಿಸುವ ಪ್ರವಚನ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಸೋಮವಾರ ಪ್ರಾರಂಭವಾದ ಕಲ್ಯಾಣ ದರ್ಶನ ಪ್ರವಚನ.. ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಾನವರು ವಿಶ್ವ ಮಾನವರಾಗಿ ಒಳ್ಳೆಯ ಸಾರ್ಥಕ ಜೀವನ ನಡೆಸಲು ಪ್ರವಚನ ಸಾಕಷ್ಟು ಪ್ರೇರಣೆ ನೀಡುತ್ತವೆ ಎಂದರು.

Advertisement

ಶ್ರಾವಣ ಮಾಸದಲ್ಲಿ ಒಳ್ಳೆಯ ವಿಚಾರ ಕೇಳಬೇಕು ಎನ್ನುವ ಕಾರಣಕ್ಕೆ 1911 ರಲ್ಲಿ ವಿರಕ್ತ ಮಠದ ಚರಮೂರ್ತಿಗಳಾಗಿದ್ದ ಮೃತ್ಯುಂಜಯ ಅಪ್ಪ ಹಾಗೂ ಕರ್ನಾಟಕದ ಗಾಂಧಿ ಹಡೇìಕರ್‌ ಮಂಜಪ್ಪನವರು ಪ್ರವಚನ ಪ್ರಾರಂಭಿಸಿದರು. 107 ವರ್ಷಗಳ ಕಾಲ ನಿರಂತರವಾಗಿ ಪ್ರವಚನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಅನೇಕರು ಒಳ್ಳೆಯ ಮಾತು ಕೇಳುವ ಬದಲಿಗೆ ಕೆಟ್ಟ, ಚಾಡಿ, ಕದ್ದು ಮಾತು ಕೇಳುವುದನ್ನು ಇಷ್ಟಪಡುತ್ತಾರೆ. ಅಂತಹ ಮಾತು ಕೇಳುವುದರಿಂದ ಜೀವನವೇ ಹಾಳಾಗುತ್ತದೆ. ಅದೇ ಒಳ್ಳೆಯ
ಮಾತುಗಳ ಕೇಳುವದರಿಂದ ಬದುಕು ಹಸನು, ಪಾವನವಾಗುತ್ತದೆ. ಜೀವನ ಸಾರ್ಥಕತೆಯ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಬುದ್ಧಿ ಮತ್ತು ಮನಸ್ಸು ಅರಳುತ್ತದೆ. ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.

ಬಸವಾದಿ ಶರಣರು, ಮಹಾತ್ಮರು, ಸಂತರು, ಮಹಾನೀಯರ ಜೀವನ ಸಾಧನೆಯ ಬಗ್ಗೆ ಕೇಳುವುದರಿಂದ ಜೀವನದಲ್ಲಿ ಎದುರಾಗುವ ಎಂತದ್ದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ, ನಿಭಾಯಿಸುವ ಮಾನಸಿಕ ಸ್ಥೈರ್ಯ ಲಭ್ಯವಾಗಲಿದೆ. ದಿನ ಕೇಳುವ ಪ್ರವಚನದಲ್ಲಿನ ಒಂದು ನುಡಿಯಂತೆ ನಡೆದುಕೊಳ್ಳುವಂತಾಗಬೇಕು ಎಂದು ಆಶಿಸಿದರು. ಪ್ರವಚನ ಉದ್ಘಾಟಿಸಿದ ಪೂರ್ವ ವಲಯ
ಪೊಲೀಸ್‌ ಮಹಾ ನಿರೀಕ್ಷಕ ಡಾ| ಎಂ.ಎ. ಸಲೀಂ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ, ಧರ್ಮ, ಮತಭೇದದ ವಿರುದ್ಧ ಮಾಡಿದಂತಹ ಅತಿ ದೊಡ್ಡ ಕ್ರಾಂತಿ ಪ್ರಸ್ತುತ ಸಮಾಜಕ್ಕೂ ದಿಕ್ಸೂಚಿಯಾಗಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ… ಎಂಬ ಜೀವನದ ಸಪ್ತ ಮಂತ್ರವ ಹೇಳಿದ್ದಾರೆ. 

800 ವರ್ಷಗಳ ಹಿಂದೆಯೇ ಬಸವಣ್ಣನವರು ನುಡಿದಂತೆ ತಮ್ಮ ಜೀವನ ನಡೆಸಿದವರು. ಬಸವಣ್ಣನವರ ತತ್ವ, ಆದರ್ಶಗಳನ್ನ ಎಲ್ಲ
ಜಾತಿ, ಮತ ಬಾಂಧವರು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಯಾವುದೇ ರೀತಿಯ ಕೋಮುಭಾವನೆ, ಸಂಘರ್ಷಕ್ಕೆ ಇರುವುದೇ ಇಲ್ಲ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ, ಬಸವಕೇಂದ್ರದ ಅಧ್ಯಕ್ಷ ಎಂ. ಜಯಕುಮಾರ್‌ ಇತರರು ಇದ್ದರು. ಗದಗದ ಟಿ.ಎಂ. ಪಂಚಾಕ್ಷರಿಶಾಸ್ತ್ರಿಗಳು ಪ್ರವಚನ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next