ಬಂಟ್ವಾಳ : ಸಾರ್ವಜನಿಕ ಗಣೇಶೋತ್ಸವದ ಮೂಲಕ ಭೇದರಹಿತವಾಗಿ ಎಲ್ಲರೂ ಒಗ್ಗೂಡಿ ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಉಪನ್ಯಾಸಕ ಕೃಷ್ಣ ಉಪಾಧ್ಯಾಯ ಹೇಳಿದ್ದಾರೆ.
ಆ. 25ರಂದು ಶ್ರೀ ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಪೆರಾಜೆ ಆಶ್ರಯದಲ್ಲಿ ಪೆರಾಜೆ ಹಿ.ಪ್ರಾ. ಶಾಲಾ ವಠಾರದಲ್ಲಿ ಏರ್ಪಡಿಸಲಾದ 8ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಬಿಜೆಪಿ ವಕ್ತಾರ, ಉದ್ಯಮಿ ಜಿತೇಂದ್ರ ಎಸ್. ಕೊಟ್ಟಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಉದ್ಯಮಿ, ರಾಷ್ಟ್ರಪ್ರಶಸ್ತಿ ವಿಜೇತ ರವಿ ಕಕ್ಯಪದವು, ಸಮಿತಿ ಗೌರವಾಧ್ಯಕ್ಷ ಡಾ| ಶ್ರೀನಾಥ್ ಆಳ್ವ , ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ , ಸ್ಥಾಪಕಾಧ್ಯಕ್ಷ ಹರೀಶ ರೈ ಪಾನೂರು, ಕೋಶಾಧಿಕಾರಿ ರಾಘವ ಗೌಡ, ಯುವ ವೇದಿಕೆಯ ಅಜಿತ್ ಗೌಡ ಉಪಸ್ಥಿತರಿದ್ದರು.
ಸಂಜೀವ ಪೂಜಾರಿ ಮಾಣಿ ಧ್ವಜಾರೋಹಣ ನೆರವೇರಿಸಿದರು. ಕಡೇಶ್ವಾಲ್ಯ ವೇ|ಮೂ| ಹರಿಭಟ್ ನೇತƒತ್ವದಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠೆ ನಡೆಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಕಾಡೂರು ಸ್ವಾಗತಿಸಿ ಪ್ರಸ್ತಾವನೆಗೆ„ದರು. ಯತಿರಾಜ ನಿರೂಪಿಸಿ, ದಿವಾಕರ ಶಾಂತಿಲ ವಂದಿಸಿದರು.
ಭಾರತೀಯ ಸಂಸ್ಕೃತಿ ಅಳವಡಿಸಿಕೊಳ್ಳಿ ವಿN°àಶನ ಆರಾಧನೆಯಿಂದ ಜ್ಞಾನ ಸಂಪಾದನೆ ಮಾಡಬಹುದು. ಭಕ್ತಿ,
ಶ್ರದ್ಧೆಯಿಂದ ಮಾಡುವ ಕೆಲಸ ಕಾರ್ಯಗಳು ಜೀವನದಲ್ಲಿ ಯಶಸ್ವಿಯಾಗುತ್ತವೆ. ಋಷಿ ಮುನಿಗಳ ತಪಸ್ಸಿನ ಫಲದಿಂದ ಬೆಳೆದು ಬಂದ ಭಾರತೀಯ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳಿ.
-ಕೃಷ್ಣ ಉಪಾಧ್ಯಾಯ