Advertisement
ನಿದಿರೆಯಮ್ಮ ಬಾರೆ ಬಾರೆ ನನ್ನ ಕಂದನ ಮಲಗಿಸು
Related Articles
Advertisement
ನಿದಿರೆಯಮ್ಮ ನನ್ನ ಕಂದನ ಮಲಗಿಸು, ಎಲ್ಲ ನೋವನು ಮರೆಸಿ
ಔಷಧ ನೀಡು ನೀನು, ಅಶ್ವಿನಿ ದೇವತೆಗಳ ಕರೆಸಿ
ಜೋಗುಳದ ಪದವ ಕೇಳಿ, ತುಟಿಯಂಚಲಿ ನಗೆಯ ಬೀರಿ
ನಿದಿರೆಯಮ್ಮನ ಬರಲು ಹೇಳಿ, ಎನ್ನ ಮಡಿಲಲಿ ನಿದ್ರೆಗೆ ಜಾರಿ
ಜೋಗುಳದವ್ವ ನೀನು ನನ್ನ ಬಾಯಲಿನ್ನಷ್ಟು ಪದವ ತರಿಸು
ಕಣ್ಮುಚ್ಚಿ ಮಲಗಿರಲು ನನ್ನ ಕಂದನ ವದನ ಸೊಗಸು
ನೀನೆನಗೆ ವರವಾದೆ ತಾಯೇ, ನನ್ನ ಮಡಿಲ ತುಂಬಿಸಿ
ಮರೆಸಿದೆ ಎಲ್ಲ ನೋವ, ಈ ಕಂದನಲಿ ನಗುವ ತರಿಸಿ
ಜೋಗುಳವ ಹೇಳುವೆ, ನಿನ್ನೆದೆಯ ತಾಳಕ್ಕೆ ತಕ್ಕ ಹಾಗೆ
ಎಲ್ಲ ನೋವು ಇರಲಿ ನನಗೆ, ಬಾರದಿರಲಿ ನಿನಗಾವ ಬೇಗೆ
ಶಿವರಾಮು ವಿ ಗೌಡ
ಪಾಂಡವಪುರ (ಮಂಡ್ಯ)