ಮೈಸೂರು: ನಮ್ಮ ತಾಯಿಯ ಆರೋಗ್ಯ ಸ್ಥಿರವಾಗಿದೆ. ಅವರು ಒಂದೆರಡು ದಿನದಲ್ಲಿ ಸಂಪೂರ್ಣವಾಗಿ ಸುಧಾರಿಸಿ ಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅಪಘಾತದ ಹಿನ್ನೆಲೆಯಲ್ಲಿ ನಾವೆಲ್ಲ ಗಾಯಗೊಂಡಿದ್ದೆವು. ಈಗ ನಾವೆಲ್ಲಾ ಅಹಮದಾಬಾದ್ ಗೆ ತೆರಳುತ್ತಿದ್ದೇವೆ. ಹೋಗಿ ತಾಯಿಯ ಆರೋಗ್ಯ ವಿಚಾರಿಸುತ್ತೇನೆ. ಪ್ರಧಾನ ಮಂತ್ರಿಗಳು ಈಗಾಗಲೆ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ. ಈಗ ನಮ್ಮ ಕುಟುಂಬದವರೆಲ್ಲಾ ಆರೋಗ್ಯವಾಗಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ, ಧನ್ಯವಾದಗಳು: ಮೋದಿ ಸಹೋದರ ಪ್ರಹ್ಲಾದ ಮೋದಿ
ನಮ್ಮನ್ನು ಮೈಸೂರು ಜೆಎಸ್ ಎಸ್ ಆಸ್ಪತ್ರೆಯಲ್ಲಿ ಉತ್ತಮವಾಗಿ ನೋಡಿಕೊಂಡರು. ನಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
Related Articles
ಪ್ರಹ್ಲಾದ ಮೋದಿ ಕುಟುಂಬ ಅಪಘಾತದಲ್ಲಿ ಗಾಯಗೊಂಡ ಬಳಿಕ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದು ಅಹಮದಾಬಾದ್ ಗೆ ತೆರಳಿದ್ದಾರೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ದಿಢೀರನೆ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ ಅಹಮದಾಬಾದ್ ಗೆ ತೆರಳಿದ್ದಾರೆ.