Advertisement

ಮಗಳ ಶಸ್ತ್ರಚಿಕಿತ್ಸೆಗೆ ತಾಯಿಯ ಪರದಾಟ

03:28 PM Jul 05, 2018 | |

ಚಿಕ್ಕಬಳ್ಳಾಪುರ: ಇಡೀ ಮನೆಯವರೆಲ್ಲಾ ಹುಟ್ಟು ಅಂಗವಿಕಲರು. ಬದುಕಿನ ಬಂಡಿ ನಡೆಸುವುದೇ ತೀರಾ ಕಷ್ಟ. ಮನೆಗೆ ಆಸರೆಯಾಗಿದ್ದ ಯಾಜಮಾನ ಇಹಲೋಕ ತ್ಯಜಿಸಿ 22 ವರ್ಷಗಳೇ ಉರುಳಿವೆ. ಬದುಕಿಗಾಗಿ ಹೂವು ಮಾರಿ ಕೊಂಡು ಜೀವನ ನಡೆಸುತ್ತಿದ್ದ ಆ ಕುಟುಂಬದಲ್ಲಿ ಈಗ ಕಿತ್ತು ತಿನ್ನುವ ಬಡತನ. ಮತ್ತೂಂದಡೆ ಸಾವು ಬದುಕಿನ ನಡುವೆ ಇರುವ ಮಗಳ ಉಳಿಸಿಕೊಳ್ಳುವ ಸವಾಲು.. ಹೌದು ಇಂಥ ಧಾರುಣ ಸ್ಥಿತಿಯಲಿರುವುದು ನಗರದ 28ನೇ ವಾರ್ಡಿನ ಮುನಿತಾಯಮ್ಮ ಕುಟುಂಬ. ಹುಟ್ಟು ಅಂಗವಿಕಲರಾಗಿರುವ ಮುನಿತಾಯಮ್ಮಗೆ ಮೌವಿಕ ಹಾಗು ಅಶ್ವಿ‌ನಿ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಹೂ ಕಟ್ಟಿ ಮಾರಿಕೊಂಡು ಹೇಗೋ ಬದುಕು ದೂಡುತ್ತಿದ್ದ ಮುನಿತಾಯಮ್ಮಗೆ ಕಷ್ಟ ತಪ್ಪಲಿಲ್ಲ. ಮನೆಯ ಸಂಕಷ್ಟ ನೋಡಿ ಮೌವಿಕ ಉಡುಪು ಕಾರ್ಖಾನೆ ಕೆಲಸಕ್ಕೆ ಹೋದರು ಕೈ ಹಿಡಿಯಲಿಲ್ಲ. ಮೌವಿಕ ಆರೋಗ್ಯದಲ್ಲಿ ದಿಢೀರ್‌ ಏರುಪೇರು ಕಾಣಿಸಿಕೊಂಡು ಹಾಸಿಗೆ ಹಿಡಿದಳು. ಇದ್ದಕ್ಕಿದ್ದಂತೆ ಮೌವಿಕ ನಡೆಯಲಾಗದ ವಿಷಮ ಸ್ಥಿತಿಗೆ ತಲುಪಿದ್ದು ಮನೆಯ ವನ್ನು ಕಂಗಾಲಾಗಿಸಿದೆ.

Advertisement

ಚಿಕಿತ್ಸೆ ಫ‌ಲ ನೀಡಿಲ್ಲ: ಮೊದಲೇ ಸಂಕಷ್ಟದಲ್ಲಿ ದಿನದೂಡುತ್ತಿರುವ ಮುನಿತಾ ಯಮ್ಮಗೆ ಒಂದಡೆ ಕುಟುಂಬ ನಿರ್ವಹಣೆ ಜತೆಗೆ ಹಾಸಿಗೆ ಹಿಡಿದ ಮೌವಿಕ ಆರೋಗ್ಯ ಕಾಪಾಡುವುದು ಸವಾಲಾ ಗಿದೆ. ಆಸ್ಪತ್ರೆಯ ಚಿಕಿತ್ಸೆ ಫ‌ಲ ನೀಡಿಲ್ಲ. ಎರಡು ಬಾರಿ ಲಕ್ಷಾಂತರ ರೂ, ಖುರ್ಚು ಮಾಡಿ ಮಾಡಿಸಿದ ಶಸ್ತ್ರಚಿಕಿತ್ಸೆ ವಿಫ‌ಲ ವಾಗಿದೆ. ಸದ್ಯ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಮೂರನೇ ಬಾರಿಗೆ ಮೌವಿಕಳ ಕಾಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಿತ್ತು ತಿನ್ನುವ ಬಡತನ ದಲ್ಲಿರುವ ತಾಯಿ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಈ ಹಿಂದೆ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಮುನಿ ತಾಯಮ್ಮ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕುಟುಂಬದ ಕಣ್ಣೀರಿನ ಕಥೆ ಕೇಳಿ ಕೆಲವು ದಾನಿಗಳು ಮುಂದೆ ಬಂದು ಹಣ ಕೊಟ್ಟಿದ್ದಾರೆ. ಆದರೂ ಶಸ್ತ್ರಚಿಕಿತ್ಸೆಗೆ ಬೇಕಾದ ಹಣ ಇನ್ನೂ ಕುಟುಂಬಕ್ಕೆ ಅವಶ್ಯಕವಾಗಿದ್ದು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

 ಮುನಿತಾಯಮ್ಮ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಬಯಸುವವರು ಬ್ಯಾಂಕ್‌ ಆಫ್ ಇಂಡಿಯಾ ಚಿಕ್ಕಬಳ್ಳಾಪುರ ಶಾಖೆಯ ಖಾತೆ ಸಂಖ್ಯೆ 846310110004529ಕ್ಕೆ (ಐಎಫ್ಎಸ್‌ಸಿ ಕೋಡ್‌: % ,’ 0008463) ಹಣ ಜಮೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next