ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ತಾಯಿಯದು ಅದುವೇ ನನ್ನ ತಾಯಿ ತುಳಸಾಬಾಯಿ.
ನಮ್ಮದು ಮದ್ಯಮ ಕುಟುಂಬ ಅದರಲ್ಲಿ ನಮ್ಮೆಲ್ಲರಿಗಿಂತ ಬೆಳಿಗ್ಗೆ ಬೇಗ ಏಳುವುದರಿಂದ ಹಿಡಿದು ರಾತ್ರಿ ಎಲ್ಲರೂ ಮಲಗಿದ ನಂತರ ತಾನು ಕೊನೆಗೆ ಮನೆಯ ಬಾಗಿಲುಗಳನ್ನು ಲಾಕ್ ಮಾಡಿದ ಬಗ್ಗೆ ಪರಿಶೀಲಿಸಿ ಮಲಗುವಳು ದಣಿವರಿಯದ ದೇವತೆ ಈ ತಾಯಿ.
ನನ್ನ ತಂದೆ ವೆಂಕಟೇಶ್ ಕೆಲವು ವಿಷಯಕ್ಕೆಹಲವು ಸಲ ಕೋಪಗೊಡರೂ ಅವರನ್ನು ಆ ಕ್ಷಣ ಸಮಾಧಾನ ಪಡಿಸಿ ಮತ್ತೆ ಸಂಸಾರದ ನೌಕೆ ನಡೆಸುವಳು ತನ್ನ ಸಿಟ್ಟನ್ನು ಸವರಿ ಹಾಕಿ ಕ್ಷಮಾದಾನ ಕರಗತ ಮಾಡಿಕೊಂಡವಳು. ನನ್ನ ಮಕ್ಕಳು ಸಹ ಸಂಸ್ಕಾರಯುತವಾಗಿ ಬೆಳೆಯಲು ಇವಳದೆ ಪ್ರಮುಖ ಪಾತ್ರವಿದೆ.
ಅಲ್ಲದೆ ನನ್ನ ಮಡದಿ ಇದ್ದರೂ ಸಹ ಮೊದಲು ಸ್ನಾನಕ್ಕೆ ನೀರು ಹಾಕಿ ಇಡುವವಳು, ತನ್ನ ಮೊಮ್ಮಕ್ಕಳು ಜನಿಸಿದಾಗ ಅವುಗಳಿಗೆ ಎಣ್ಣೆ ಸ್ನಾನ (ಎರೆಯುವುದು) ವಿಶೇಷ ಮಸಾಜ್ ಮಾಡುವ ಕಲೆ ಅರಿತವಳು ಇದನ್ನೊಡಿದ ಪಕ್ಕದ ಮನೆಯವರು ಸಹ ತಮ್ಮ ಎಳೆಯ ಮಕ್ಕಳಿಗೂ ಇವಳಿಂದಲೇ ಎರೆಯಲು ಹೇಳುತ್ತಿದ್ದರು.
ಇವಳ 40 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ಅವರಿಗೆ ಗೊತ್ತಾಗದ ಹಾಗೆ ತಂದೆ ತಾಯಿ ಇಬ್ಬರಿಗೂ ಹೊಸ ಬಟ್ಟೆಗಳನ್ನು ತಂದು ಹೂ ಹಾರಗಳಿಂದ ಸಣ್ಣ ಸಮಾರಂಭ ಮಾಡಿದೆವು. ಆ ಕ್ಷಣ ಅದೆನೆಲ್ಲ ನೋಡಿ ಅವರಿಗೆ ತಿಳಿಯಿತು ಅದು ನನ್ನ ಉಡುಗೊರೆ ಅವಳು ಅಂದು ಇಡಿ ದಿನ ಖುಷಿಯಾಗಿದ್ದಳು.
ನನ್ನ ತಂದೆಗೆ ತಕ್ಕ ಹೆಂಡತಿಯಾಗಿ ನಮಗೆ ಪ್ರೀತಿಯ ತಾಯಿಯಾಗಿ,ಸೊಸೆಗಳಿಗೆ ಆತ್ಮೀಯಳಾಗಿ ಮೊಮ್ಮಕ್ಕಳಿಗೆ ಮಮತೆಯ ಅಜ್ಜಿಯಾಗಿರುವುದಕ್ಕೆ ಈ ತಾಯಂದಿರ ದಿನದಂದು ಅವಳಿಗೆ ಶುಭಕೋರುತ್ತೇನೆ.
– ಚಂದ್ರಶೇಖರ ವೆ., ದಾದನಟ್ಟಿ ಮಹಾಲಿಂಗಪುರ, ಬಾಗಲಕೋಟೆ ಜಿಲ್ಲೆ