ಹುಬ್ಬಳ್ಳಿ: ನಗರದ ದೇಶಪಾಂಡೆ ಶಿಕ್ಷಣ ಪ್ರತಿಷ್ಠಾನ ಮತ್ತು ದೇಶಪಾಂಡೆ ಚೈತನ್ಯ ಫೆಲೋಶಿಪ್ ತರಬೇತಿ ಕಾರ್ಯಕ್ರಮ
ಸಹಯೋಗದಲ್ಲಿ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.
ಪ್ರೊ | ಉಷಾ ಸರೋದ್ಯಾ ಮಾತನಾಡಿ, ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾತೃತ್ವದ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಆಕೆಯ ತ್ಯಾಗ ಮನೋಭಾವನೆಯು ಪ್ರತಿಯೊಬ್ಬ ಮಗುವಿಗೂ ಮಾರ್ಗದರ್ಶಿಯಾಗಿದೆ. ಆಕೆಗಿಂತ ಮಿಗಿಲಾದ ಜ್ಞಾನಧಾರೆ ಬೇರೆಲ್ಲೂ ಇಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಹರಳಯ್ಯ ಮಾತನಾಡಿ, ನಾವೆಲ್ಲರೂ ಅಮ್ಮನ ಎದೆಯಾಳದಲ್ಲಿ ಪುಟ್ಟ ಕಂದಮ್ಮಗಳು. ಜಗತ್ತಿಗೆ ತಾಯಿಯೇ ಸರ್ವಶಕ್ತಿ. ಅವಳು ಕಲಿಸಿದ ಸಂಸ್ಕಾರ ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಎಂದರು. ಕಾರ್ಯಕ್ರಮ ವ್ಯವಸ್ಥಾಪಕ ಡಿ.ಬಿ. ವಣಗೇರಿ ಮತ್ತು ಆ್ಯನಿ ವರ್ಗಿಸ್ ಮಾತನಾಡಿದರು. ಪ್ರತಿಷ್ಠಾನದ ವಿದ್ಯಾರ್ಥಿಗಳು ತಾಯಿಯಾಧಾರಿತ ಕಿರುನಾಟಕ ಮತ್ತು ನೃತ್ಯ ನಡೆಸಿಕೊಟ್ಟರು. ಸಂತೋಷ ಬಿರಾದಾರ, ಶುಭಂ ಸಾಳುಂಕೆ, ಪ್ರವೀಣ ಪಾಟೀಲ , ಶ್ವೇತಾ ಕೆ., ಮಲ್ಲಿಕಾರ್ಜುನ ಅಂಬಲಗಿ, ಮೇಘಾ ಸೊಲಗಿ, ಮೇಘಾ ಎ.ಸಿ,. ಆಶಾ, ಪ್ರಿಯಾ ಉಪಸ್ಥಿತರಿದ್ದರು.