ಬೆಂಗಳೂರು: ಸಾಲ ತೀರಿಸಲು ತಾಯಿಯ ಸ್ನೇಹಿತೆ ಮನೆ ಬಾಗಿಲು ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾ ಭರಣ ಕಳವು ಮಾಡಿದ್ದ ಮೆಕಾನಿಕಲ್ ಎಂಜಿನಿಯರ್‌ನನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಕೆ.ಪಿ.ಅಗ್ರಹಾರದ ಟೆಲಿಕಾಂ ಲೇಔಟ್ ನಿವಾಸಿ ಮದನ್‌ಕುಮಾರ್(34) ಬಂಧಿತ ಎಂಜಿನಿಯರ್. ಈತನಿಂದ 6.57 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನಾಭರಣ, 30 ಸಾವಿರ ರೂ. ಮೌಲ್ಯದ 458 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1.35 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿ ಜ.17ರಂದು ಟೆಲಿ ಕಾಂ ಲೇಔಟ್‌ನಲ್ಲಿರುವ ವೃದ್ಧ ದಂಪತಿ ಮನೆಯಲ್ಲಿ ಕಳವು ಮಾಡಿದ್ದ. ಕೃತ್ಯಕ್ಕೂ ಮೊದಲು ಯುಟ್ಯೂಬ್, ವೆಬ್ ಸೀರಿಸ್‌ನಲ್ಲಿ ಕೃತ್ಯದ ಬಗ್ಗೆ ತಿಳಿದುಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಮೆಕಾನಿಕಲ್ ಎಂಜಿನಿಯರ್ ಆಗಿರುವ ಮದನ್, ಕುಂಬಳಗೋಡಿನಲ್ಲಿ ಅಲ್ಯೂಮಿನಿಯಂ ಸಂಬಂಧಿತ ಕಾರ್ಖಾನೆ ನಡೆಸುತ್ತಿದ್ದ. ಕಳೆದ ವರ್ಷ ವಿದ್ಯುತ್ ಅವಘಡದಿಂದ ಇಡೀ ಕಾರ್ಖಾನೆ ಸುಟ್ಟು ಲಕ್ಷಾ ಂತರ ರೂ. ನಷ್ಟವಾಗಿತ್ತು. ನಷ್ಟ ಭರಿಸಲು ಹಲವರಿಂದ ಸಾಲ ಮಾಡಿದ್ದು, ತೀರಿಸಲು ಸಾಧ್ಯವಾಗಿಲ್ಲ. ಈತ ಕೂಡ ಬೇರೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ಯುಟ್ಯೂಬ್, ವೆಬ್‌ಸೀರಿಸ್‌ಗಳನ್ನು ನೋಡಿ ಕಳ್ಳತನ ಮಾಡಲು ತೀರ್ಮಾನಿಸಿದ್ದ ಎಂದು ಪೊಲೀಸರು ಹೇಳಿದರು.
ತಾಯಿ ಸ್ನೇಹಿತೆ ಮನೆಯಲ್ಲಿ ಕಳವು: ಆರೋಪಿ ಮದನ್ ತಾಯಿಯ ಸ್ನೇಹಿತೆ ಟೆಲಿಕಾಂ ಲೇಔಟ್‌ನಲ್ಲಿ ಪತಿ ಜತೆ ವಾಸವಾಗಿದ್ದಾರೆ. ದಂಪತಿ ನಿತ್ಯ ಬೆಳಗ್ಗೆ 8 ಗಂ ಟೆಗೆ ವಾಯುವಿಹಾರಕ್ಕೆ ಹೋದರೆ, 10 ಗಂಟೆಗೆ ವಾಪಸ್ ಬರುತ್ತಿದ್ದರು. ಈ ವಿಚಾರ ತಿಳಿದಿದ್ದ ಆರೋಪಿ, ಕೈಗೆ ಗ್ಲೌಸ್ ಹಾಕಿ ಕೊಂಡು, ವುಡ್ ಕಟರ್ ಸಮೇತ ದಂಪತಿ ಮನೆಗೆ ಹೋಗಿದ್ದಾನೆ. ಬಳಿಕ ಬಾಗಿಲನ್ನು ವುಡ್ ಕಟರ್‌ನಿಂದ ಕತ್ತರಿಸಿ, ಒಳ ಹೋಗಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾ ಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಕಳವು ಮಾಡಿದ್ದಾನೆ.
ಜತೆಗೆ ಸಾಕ್ಷ್ಯನಾಶ ಪಡಿಸುವ ಉದ್ದೇಶ ದಿಂದ ಮನೆಯಲ್ಲಿ ಖಾರದ ಪುಡಿ ಎರಚಿ. ಸಿಸಿ ಕ್ಯಾಮೆರಾದ ಡಿವಿಆರ್ ಕದ್ದು ಸ್ಥಳ ದಿಂದ ಪರಾರಿಯಾಗಿದ್ದ. ಕೆಲ ಹೊತ್ತಿನ ಬಳಿಕ ವೃದ್ಧ ದಂಪತಿ ಮನೆಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆ ಸಿದ ಕೆ.ಪಿ.ಅಗ್ರಹಾರ ಠಾಣಾಧಿಕಾರಿ ರವಿ ಪ್ರಕಾಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.