Advertisement

ಮಾತೆ ಮಹಾದೇವಿ ತೇಜೋವಧೆಗೆ ಭಾರಿ ಆಕ್ರೋಶ 

07:00 AM Jul 30, 2017 | |

ಬೆಂಗಳೂರು: ಮಾತೆ ಮಹಾದೇವಿ ಅವರ ವಿರುದ್ದ ರಂಭಾಪುರಿ ಶ್ರೀಗಳು ನೀಡಿದ್ದಾರೆನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ರಂಭಾಪುರಿ ಶ್ರೀಗಳು ಕೂಡಲೇ ಕ್ಷಮೆ ಯಾಚಿಸಬೇಕು ಎಂಬ ಆಗ್ರಹ
ವ್ಯಕ್ತವಾಗಿದೆ.

Advertisement

ಬೆಂಗಳೂರು, ಕೊಪ್ಪಳ, ಬೀದರ್‌, ಧಾರವಾಡ ಸೇರಿದಂತೆ ಹಲವೆಡೆ ರಾಷ್ಟ್ರೀಯ ಬಸವ ದಳ ಟ್ರಸ್ಟ್‌ ಸದಸ್ಯರು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಬಸವದಳ ಟ್ರಸ್ಟ್‌ ಸದಸ್ಯರು ಶನಿವಾರ ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭ ಟನೆ ನಡೆಸಿ, ಶ್ರೀಗಳ ಭಾವಚಿತ್ರ ವಿರೂಪಗೊಳಿಸಿ, ಬೆಂಕಿ ಹಚ್ಚಿದರು. ಮಹಿಳಾ ಪೀಠಾಧಿಧೀಶರಾಗಿ ಮಾತೆ ಮಹಾದೇವಿ ಬಸವ ತತ್ವದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಂತಹ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವುದನ್ನು ಬಿಟ್ಟು, ಅವರ ತೇಜೋವಧೆ ಮಾಡಲು ರಂಭಾಪುರಿ ಶ್ರೀ ಮುಂದಾಗಿದ್ದಾರೆಂದು ಬಸವ ದಳದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಆಕ್ಷೇಪಾರ್ಹ ಹೇಳಿಕೆ ಕುರಿತಾಗಿ ರಂಭಾಪುರಿ ಶ್ರೀಗಳು ಕೂಡಲೇ ಕ್ಷಮೆ ಕೇಳಬೇಕು. ಅವರು ಬೇಕಿದ್ದರೆ ವೀರಶೈವದ ಬಗ್ಗೆ ಮಾತನಾಡಲಿ. ಆದರೆ, ಲಿಂಗಾಯತ ಧರ್ಮದ ಬಗ್ಗೆಯಾಗಲಿ, ಧರ್ಮಗುರು ಬಸವಣ್ಣನವರ ಬಗ್ಗೆಯಾಗಲಿ ಹಗುರವಾಗಿ ಮಾತನಾಡಿದರೆ ರಾಷ್ಟ್ರೀಯ ಬಸವ ದಳ ಉಗ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆ ಮುಖಂಡರು ಎಚ್ಚರಿಸಿದರು.

ಬೀದರ್‌ನಲ್ಲೂ ಜಿಲ್ಲಾ ಸಮಾಜ ಮತ್ತು ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾತಾಜಿ
ಅನುಯಾಯಿಗಳು ರಂಭಾಪುರಿ ಶ್ರೀಗಳ ಅಣಕು ಶವಯಾತ್ರೆಯೊಂದಿಗೆ ಡೀಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಬಸವ ತತ್ವವನ್ನು ದೇಶ ಮಾತ್ರವಲ್ಲದೇ ವಿಶ್ವಕ್ಕೆ ಪರಿಚಯಿಸಿ ಪ್ರಚಾರ ಮಾಡುತ್ತಿರುವ ಮಾತೆ ಮಹಾದೇವಿ ವಿರುದಟಛಿ ರಂಭಾಪುರಿ ಶ್ರೀಗಳು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಖಂಡನೀಯ.

ಕೂಡಲೇ ಶ್ರೀಗಳು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆಯಲಿದೆ ಎಂದು ಹಿಂದುಳಿದ ವರ್ಗಗಳ ನಾಯಕ ಬಿ. ನಾರಾಯಣ ಎಚ್ಚರಿಸಿದರು. ಮಾತೆ ಮಹಾದೇವಿ ಅವರ ವಿರುದಟಛಿ ನೀಡಿದ್ದಾರೆನ್ನಲಾದ ಹೇಳಿಕೆ ಖಂಡಿಸಿ ರಂಭಾಪುರಿ ಶ್ರೀಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭವ ಪೀಠದ ಸದಸ್ಯರು ಡೀಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು

ಬೀದರ್‌ನಲ್ಲಿ ಲಿಂಗಾಯತ ಸಮನ್ವಯ ಸಮಿತಿ ರಂಭಾಪುರಿ ಶ್ರೀಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿರುವುದು ಖಂಡನಾರ್ಹ.
– ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು

ಹಳ್ಳಿಖೇಡ(ಬಿ) ಚಿಕ್ಕಮಠ ಮಾತೆ ಮಹಾದೇವಿ ಬಗ್ಗೆ ರಂಭಾಪುರಿ ಶ್ರೀಗಳು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಖಂಡನೀಯ. ಅವರು ಕೂಡಲೇ ಬಹಿರಂಗ ಕ್ಷಮೆ ಕೋರಬೇಕು.
– ದಾನೇಶ್ವರಿ ಮಾತಾಜಿ ರಾಷ್ಟ್ರೀಯ ಬಸವದಳದ
ಚಿತ್ರದುರ್ಗ ಜಿಲ್ಲಾ ಘಟಕ ಮುಖ್ಯಸೆ

Advertisement

Udayavani is now on Telegram. Click here to join our channel and stay updated with the latest news.

Next