ನೆಲಮಂಗಲ: ನವಜಾತ ಶಿಶುವಿಗೆ ತಾಯಿಯ ಎದೆಹಾಲು ಅತ್ಯ ವಶ್ಯಕ. ಅದು ಅಮೃತವೂ ಹೌದು. ಅದಕ್ಕಿಂತ ಶ್ರೇಷ್ಠವಾ ದುದು ಯಾವುದೂ ಇಲ್ಲ. ಏಕೆಂದರೆ ಅದು ಪೌಷ್ಟಿಕ ಆಹಾರ. ಸಂಪೂರ್ಣ ಸುರಕ್ಷಿತ ಮತ್ತು ಸರಳವಾಗಿ ಜೀರ್ಣವಾಗುವ ಆಹಾರವಾಗಿದ್ದು, ತಾಯಿ ಮತ್ತು ಮಗು ಇಬ್ಬರ ಆರೋಗ್ಯ ವೃದ್ಧಿಸುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ. ಸೋನಿಯಾ ತಿಳಿಸಿದರು.
ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಇನ್ನರ್ ವ್ಹೀಲ್ ವತಿಯಿಂದ ಹಮ್ಮಿಕೊಂಡಿದ್ದ ಸ್ತನ್ಯಪಾನ ಜಾಗೃತಿ ಮತ್ತು ವಿವಿಧ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಯಿ ಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ತಕ್ಕ ಪ್ರಮಾಣದಲ್ಲಿರುತ್ತವೆ. ಕಾಬೋì ಹೈಡ್ರೇಟ್‌ಗಳು, ಪ್ರೋಟಿನ್‌ಗಳು, ಮೇದಸ್ಸು , ಜೀವಸತ್ವಗಳು, ಲವಣಾಂಶ, ರೋಗನಿರೋಧಕ ಅಂಶಗಳು ಮತ್ತು ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ (87%) ನೀರಿನಾಂಶರುತ್ತದೆ. ಇವೆಲ್ಲಾ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದು ತಿಳಿಸುವ ಮೂಲಕ ಜಾಗೃತಿ ಮೂಡಿಸಿದರು.
ರೋಟರಿ ಇನ್ನರ್ ವ್ಹೀಲ್ ಅಧ್ಯಕ್ಷೆ ಮಂಜುಳಾ ಸಿದ್ದರಾಜು ಮಾತನಾಡಿ, ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಗುವಿನ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅವಶ್ಯಕವಾಗಿದೆ. ಮಕ್ಕಳಲ್ಲಿ ವಾಂತಿಭೇದಿ, ಮಲಬದ್ಧತೆ, ಅಲರ್ಜಿ, ಕಿವಿ ಸೋರುವಿಕೆ, ಮತ್ತಿತರ ರೋಗಗಳನ್ನು ತಡೆಗಟ್ಟುತ್ತದೆ ಎಂದು ತಿಳಿಸಿದರು.
ಅಭಿನಂದನೆ: ಕಾರ್ಯಕ್ರಮದಲ್ಲಿ ಕೋವಿಡ್ ನಡುವೆಯೂ ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ತಜ್ಞವೈದ್ಯೆ ಡಾ.ಸೋನಿಯಾ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹರೀಶ್ ಅವರನ್ನು ಅಭಿನಂದಿಸಲಾಯಿತು. ಗರ್ಭಿಣಿಯರಿಗೆ ಶಾಲು, ಮಕ್ಕಳಿಗೆ ಸ್ವೆಟರ್ ಮತ್ತು ಬೆಡ್, ಚಾಕ್ ಲೇಟ್ ಮತ್ತಿತರರ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಇನ್ನರ್ ವ್ಹೀಲ್‌ನ ಮಾಜಿ ಅಧ್ಯಕ್ಷ ಶಾರದಾ ಸುಂದರೇಶ್, ಕಾರ್ಯದರ್ಶಿ ದಿವ್ಯಾ, ಐಎಸ್‌ಒ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.