ಹುಬ್ಬಳ್ಳಿ: ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ. ಆತನೇ ಅವಳ ಹಿಂದೆ ಬೆನ್ನು ಬಿದ್ದಿದ್ದ ಎಂದು ನೇಹಾಳ ತಾಯಿ ಗೀತಾ ಹಿರೇಮಠ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಕ್ಷಮೆ ಪಡೆದುಕೊಂಡು ಏನು ಮಾಡಲಿ. ನನ್ನ ಮಗಳು ವಾಪಸ್ಸು ಬರಲ್ಲವಲ್ಲ ಎಂದು ದುಃಖ ತೋಡಿಕೊಂಡರು.
ಮಗಳು ಕಾಲೇಜ್ ಹೋಗುತಿದ್ದಳು. ಬೋಲ್ಡ್ ಆಗಿದ್ದಳು. ನಮ್ಮ ಮಗಳು ಅಂಥವಳಲ್ಲ. ಆತ ಏನು ಮದುವೆ ಬಗ್ಗೆ ಮಾತನಾಡಿಲ್ಲ. ಒಂದೇ ಕಾಲೇಜ್ ನಲ್ಲಿ ಓದುತ್ತಿದ್ದರು. ಈಗಿನ ತಂತ್ರಜ್ಞಾನದಲ್ಲಿ ತಮಗೆ ಹೇಗೆ ಬೇಕೋ ಹಾಗೆ ಫೊಟೋ ಎಡಿಟ್ ಮಾಡುತ್ತಾರೆ ಎಂದು ಆರೋಪಿಸಿದರು.
ಅವಳ ಓದು ಚೆನ್ನಾಗಿ ನಡೆದಿತ್ತು. ನನ್ನ ಮಗಳಿಗೆ ಶಾಂತಿ ಸಿಗಬೇಕೆಂದರೆ ಆತ ಬದುಕಬಾರದು. ಅವನನ್ನು ಜನರ ಕೈಗೆ ಕೊಡಿ. ಜೈಲಿನಲ್ಲಿ ಇಟ್ಟರೆ ಏನು ಪ್ರಯೋಜನ ಎಂದರು.
ಕಾಲೇಜ್ ಗೆ ಮೂರು ಗೇಟ್ ಇದೆ. ಯಾರಾದರೂ ಬರುತ್ತಾರೆ ಹೋಗುತ್ತಾರೆ. ಅಲ್ಲಿ ಯುವತಿಯರಿಗೆ ರಕ್ಷಣೆ ಎಂಬುದಿಲ್ಲ. ಘಟನೆ ನನ್ನ ಕಣ್ಣ ಮುಂದೆ ನಡೆದಿದೆ. ಹತ್ತು ಹೆಜ್ಜೆ ದೂರ ಇದ್ದೆ. ಕಲಿಯಲು ಕಳುಹಿಸಿದರೆ ಹೆಣವಾಗಿ ಬರುತ್ತಾರೆ ಅಂದರೆ ಹೇಗೆ? ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ ಎಂದು ನೇಹಾ ತಾಯಿ ಗೀತಾ ಹೇಳಿದರು.