Advertisement

ಛೇ..ಮಗಳ ಮದುವೆ ಮಂಟಪದಲ್ಲೇ ತಾಯಿ ಹೃದಯಾಘಾತದಿಂದ ವಿಧಿವಶ

04:39 PM Apr 20, 2017 | Team Udayavani |

 ಬೆಳ್ತಂಗಡಿ: ಮಗಳ ಮದುವೆಯನ್ನು ಸಂಭ್ರಮದಿಂದ ನೋಡುತ್ತಾ ಸಂತಸದಲ್ಲಿದ್ದ ತಾಯಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ನಡೆದಿದೆ. 

Advertisement

ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪ ಎನ್ನುವವರ ಪತ್ನಿ ವಾರಿಜಾ (50) ಎನ್ನುವವರು ಮಗಳ ಮದುವೆ ಮುಗಿದ ಬಳಿಕ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನವ್ಯ ಮತ್ತು ಆನಂದ ಅವರ ವಿವಾಹ ನೆರವೇರಿತ್ತು. ಸಂಭ್ರಮದಿಂದ ನಲಿಯಬೇಕಾಗಿದ್ದ ಮನೆಯಲ್ಲೀಗ ಸೂತಕ ಆವರಿಸಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next