Advertisement
ಜಯಂತಿನಗರದ ನಿವಾಸಿ ಮೀನಾ (24) ಆಕೆಯ ಮಗು ಸುಗುಣ (3) ಮೃತಪಟ್ಟಿದ್ದು, ಚರಣ್ (7) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Related Articles
Advertisement
ಕೂಡಲೇ ಅಕ್ಕಪಕ್ಕದ ಮನೆಗಳವರು ನೆರವಿಗೆ ಬಂದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮೀನಾ ಹಾಗೂ ಸುಗುಣ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಚರಣ್‌ಗೆ ಚಿಕಿತ್ಸೆ ನೀಡಿದ್ದಾರೆ.
ಮೀನಾ ಹಾಗೂ ಸುಗುಣಳ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಸಂಬಂಧಿಕರಿಗೆ ಒಪ್ಪಿಸಿದ್ದು, ಅಂತ್ಯಕ್ರಿಯೆಗೆ ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ವಿವರಿಸಿದರು.
ಮೃತ ಮೀನಾ ಅವರ ಪೋಷಕರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. 2011ರಲ್ಲಿ ಕುಮಾರೇಶನ್ ಹಾಗೂ ಮೀನಾ ವಿವಾಹವಾಗಿದ್ದು, ದಂಪತಿ ಅನೂನ್ಯವಾಗಿದ್ದರು. ಮೀನಾಳದ್ದು ಅತ್ಯಂತ ಮೌನ ಸ್ವಭಾವ, ಯಾರೊಂದಿಗೂ ಮುಕ್ತವಾಗಿ ಬೆರೆಯುತ್ತಿರಲಿಲ್ಲ.
ಘಟನೆ ನಡೆಯುವ ಹಿಂದಿನ ದಿನ ಕುಮಾರೇಶನ್, ಪತ್ನಿ ಹಾಗೂ ಮಕ್ಕಳನ್ನು ಹೊರಗಡೆ ಊಟಕ್ಕೆ ಕರೆದೊಯ್ದಿದ್ದರು ಎಂದು ಮೀನಾಳ ಪೋಷಕರಾದ ಪನ್ನೀರಸೆಲ್ವಂ ಹಾಗೂ ರಾಧಾ ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ವಾರ ಹಿಂದಷ್ಟೇ ಇಂಥದ್ದೇ ಘಟನೆ: ಕಳೆದ ಒಂದು ವಾರದ ಹಿಂದಷ್ಟೇ ಚಂದ್ರಲೇಔಟ್ ಸಮೀಪದ ಕಲ್ಯಾಣನಗರದಲ್ಲಿ ಗೃಹಿಣಿಯೊಬ್ಬರು ಎರಡೂವರೆ ವರ್ಷದ ಮಗನನ್ನು ನೇಣುಬಿಗಿದು ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದ ಮಂಗಳೂರು ಮೂಲದ ಪ್ರತಿಮಾ ಮಂಗಲೋರರ್, ಪುತ್ರ ಸಾತ್ವಿಕ್‌ನನ್ನು ನೇಣುಬಿಗಿದು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.