Advertisement

ನೌಕರಿಗಾಗಿ ಚಿಮ್ಮನಕಟ್ಟಿ ಮನೆ ಮುಂದೆ ಆತ್ಮಹತ್ಯೆ

06:45 AM Mar 23, 2018 | Team Udayavani |

ಬಾದಾಮಿ: ಗ್ರಾಮ ಸೇವಕ ಹುದ್ದೆಗೆ ತನ್ನ ಮಗನನ್ನು ನೇಮಕ ಮಾಡುವಂತೆ ಮಾಡಿದ ಮನವಿಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಶಾಸಕ ಚಿಮ್ಮನಕಟ್ಟಿ ಅವರ ಮನೆ ಎದುರೇ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

ಶಾಂತವ್ವ ಗೋವಿಂದಪ್ಪ ವಾಲಿಕಾರ(45) ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆಯ ಪತಿ ಗೋವಿಂದಪ್ಪ ಬಾದಾಮಿ ತಾಲೂಕು ಯರಗೊಪ್ಪ ಗ್ರಾಮದ ಗ್ರಾಮ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪುತ್ರ ಶಂಕ್ರಪ್ಪ ವಾಲಿಕಾರ ತಾತ್ಕಾಲಿಕ ನೆಲೆಯಲ್ಲಿ ಅದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಶಂಕ್ರಪ್ಪ ಅವರನ್ನು ಕೆಲಸದಿಂದ ತೆಗೆದು ಅನಂತಗಿರಿ ಗ್ರಾಮದ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಮರಳಿ ತನ್ನ ಮಗನನ್ನೇ ನೇಮಕ ಮಾಡಬೇಕು ಎಂದು ಚಿಮ್ಮನಕಟ್ಟಿಗೆ ಶಾಂತವ್ವ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಲಿಲ್ಲವೆಂದು ಗುರುವಾರ ಬೆಳಗ್ಗೆ ಶಾಂತವ್ವ, ಶಾಸಕರ ಮನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಿಮ್ಮನಕಟ್ಟಿ ಸೇರಿದಂತೆ 8 ಜನರ ವಿರುದಟಛಿ ಜಾತಿ ನಿಂದನೆ,
ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಚಿಮ್ಮನಕಟ್ಟಿ ಅವರ ಪತ್ನಿ ರತ್ನಕ್ಕ ಚಿಮ್ಮನಕಟ್ಟಿ, ಪುತ್ರ ಭೀಮಸೇನ ಚಿಮ್ಮನಕಟ್ಟಿ,
ತಹಸೀಲ್ದಾರ್‌ ಎಸ್‌.ರವಿಚಂದ್ರನ್‌ ನಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತ ಶಾಂತವ್ವ ಅವರ ಪುತ್ರ ಶಂಕ್ರಪ್ಪ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next