Advertisement

ವಿಷದ ಹಾವಿನ ಕಡಿತ: ಎದೆ ಹಾಲು ಉಂಡ ಮಗು, ತಾಯಿ ಸಾವು

12:02 PM May 25, 2018 | udayavani editorial |

ಮುಜಫ‌ರನಗರ : ವಿಷದ ಹಾವಿನ ಕಡಿತಕ್ಕೆ ಗುರಿಯಾದ ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷ ಪ್ರಾಯದ ಹೆಣ್ಣು ಮಗುವಿಗೆ ಎದೆ ಹಾಲು ಊಡಿಸಿದ ಪರಿಣಾಮವಾಗಿ ಮಗು ಮತ್ತು ತಾಯಿ ಎರಡೂ ಮೃತಪಟ್ಟ ಘಟನೆ ಮುಜಫ‌ರನಗರ ಜಿಲ್ಲೆಯ ಮಂಡ್ಲಾ ಗ್ರಾಮದಲ್ಲಿ ನಡೆದಿದೆ.

Advertisement

ಮಂಡ್ಲಾ ಗ್ರಾಮದಲ್ಲಿ ನಿನ್ನೆ ಗುರುವಾರ ಸಂಜೆ ಈ ಹೃದಯವಿದ್ರಾವಕ ಘಟನೆ ನಡೆಯಿತು. 

ಮಹಿಳೆಯು ತನ್ನ ಮನೆಯಲ್ಲಿ ನಿದ್ರಿಸಿಕೊಂಡಿದ್ದಾಗ ವಿಷದ ಹಾವು ಆಕೆಗೆ ಕಚ್ಚಿತು. ಆದರೆ ಹಾವಿನ ಕಡಿತ ಆಕೆಯ ಅನುಭವಕ್ಕೆ ಬರಲಿಲ್ಲ. ಅದಾಗಿ ಆಕೆ ತನ್ನ ಮಗುವಿಗೆ ಎದೆ ಹಾಲೂಡಿಸಿದಳು. 

ಗಂಭೀರ ಸ್ಥಿತಿಯಲ್ಲಿದ್ದ ತಾಯಿ – ಮಗುವನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಮೊದಲ ಮಗು ಸತ್ತಿತ್ತು; ಅನಂತರ ತಾಯಿ ಕೊನೆಯುಸಿರೆಳೆದಳು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next