Advertisement

ರಸ್ತೆ ಹೊಂಡಗಳಿಗೆ ಮುಕ್ತಿ ನೀಡಿದ ತಾಯಿ, ಮಗಳು! 

01:17 AM Jul 28, 2021 | Team Udayavani |

ಉಪ್ಪಿನಂಗಡಿ: ಭಾರೀ ಮಳೆಯಿಂದಾಗಿ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬಹಳಷ್ಟು ಹಲವಾರು ಹೊಂಡಗಳು ಸೃಷ್ಟಿಯಾಗಿದ್ದು, ಸಂಭವನೀಯ ಅಪಘಾತವನ್ನು ತಪ್ಪಿಸುವ ಸಲುವಾಗಿ ತಾಯಿ ಮತ್ತು ಮಗಳು ಸೇರಿಕೊಂಡು ಹೊಂಡಗಳನ್ನು ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

Advertisement

ಕೆಮ್ಮಾರಕ್ಕೆ ಬರುವ ಧಾರಿ ಮಧ್ಯೆ ಪೆರಿಯಡ್ಕದ ಕಿಂಡೋವಿನಲ್ಲಿ ರಸ್ತೆಯಲ್ಲಿನ ಹೊಂಡ-ಗುಂಡಿಯನ್ನು ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚಿದರು.

ಈ ಜಾಗದಲ್ಲಿ ವರ್ಷವೂ ಮಳೆಗಾಲದಲ್ಲಿ ಹೊಂಡಗಳು ನಿರ್ಮಾಣವಾಗುತ್ತಿದ್ದು 3 ವರ್ಷಗಳಿಂದ ಪ್ರತೀ ವರ್ಷ ಅಪ‌ಘಾತಗಳಾಗಿ ಸಾವು-ನೋವು ಸಂಭವಿಸಿದೆ. ನಮ್ಮ ಮನೆ ಇಲ್ಲೇ ಸಮೀಪದಲ್ಲಿದ್ದು, ವಾಹನಗಳ ಚಕ್ರಗಳು ಈ ಹೊಂಡಗಳಿಗೆ ಬಿದ್ದಾಗ ಭಾರೀ ಶಬ್ದ ಕೇಳಿಸುವುದಲ್ಲದೆ ಅಪಘಾತದ ದೃಶ್ಯಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಅಂತಹ ಘಟನೆಗಳು ಮುಂದೆ ಸಂಭವಿಸದಿರಲಿ ಎಂದು ನಮ್ಮಿಂದ ಆಗುವ ಕಿಂಚಿತ್‌ ಸೇವೆ ಮಾಡುತ್ತಿದ್ದೇವೆ ಎಂದು ಅನಂತಾವತಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next