Advertisement
ಭಾನುವಾರ ರಾತ್ರಿ ಜ್ಞಾನ ಭಾರತಿ ಠಾಣೆಯ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಜ್ಞಾನ ಭಾರತಿ ಹೆಡ್ ಕಾನ್‌ಸ್ಟೆಬಲ್ ಚಂದ್ರಶೇಖರ್ ಅವರು ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಅಚ್ಯುತ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಚಂದ್ರಶೇಖರ್ ಅವರ ಮೇಲೂ ದಾಳಿ ನಡೆಸಿದ್ದ, ಎದೆಗುಂದದೆ ಆತನನ್ನು ವಶಕ್ಕೆ ಪಡೆದಿದ್ದರು.
Related Articles
Advertisement
ಈತ ಒಂಟಿಯಾಗಿ ಸರಗಳ್ಳತನ ಮಾಡುತ್ತಿದ್ದು, ಇದನ್ನೇ ವೃತ್ತಿಯಾಗಿಸಿಕೊಂಡಿದ್ದ ಎನ್ನಲಾಗಿದೆ. ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರಿನ ವಿವಿಧೆಡೆ ಈತ ಸರಗಳ್ಳತನ ನಡೆಸಿದ್ದ ಎಂದು ತಿಳಿದು ಬಂದಿದೆ. ಪಲ್ಸರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬರುತ್ತಿದ್ದ ಈತ ಒಂಟಿ ಮಹಿಳೆಯರನ್ನು ಬೆಳ್ಳಂಬೆಳಗ್ಗೆ ಮತ್ತು ಸಂಜೆ ಕಳೆದ ಬಳಿಕ ಟಾರ್ಗೆಟ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಿವಿಧೆಡೆ ಸಿಸಿಟಿವಿಯಲ್ಲಿ ಈತನ ಕೃತ್ಯ ದಾಖಲಾಗಿದ್ದು ಪೊಲೀಸರಿಗೆ ಈತ ಮೋಸ್ಟ್ ವಾಂಟೆಡ್ ಆಗಿದ್ದ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಚಂದ್ರಶೇಖರ್‌ಗೆ ಬಹುಮಾನ ಕುಖ್ಯಾತನನ್ನು ವಶಕ್ಕೆ ಪಡೆದ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರಿಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಕುಟುಂಬದ ಉತ್ತರ ಭಾರತ ಪ್ರವಾಸಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಗಾಯಗೊಂಡಿರುವ ಹಿನ್ನಲೆಯಲ್ಲಿ ಚೇತರಿಸಿಕೊಳ್ಳಲು 1 ತಿಂಗಳು ರಜೆಯನ್ನೂ ನೀಡಲಾಗಿದೆ.