Advertisement

ಅಮೆರಿಕ ವೀಸಾ ಸಿಗಲು ಕಾಯಬೇಕು ಹೆಚ್ಚಿನ ಸಮಯ

12:21 AM Nov 01, 2021 | Team Udayavani |

ನವದೆಹಲಿ: ಸದ್ಯಕ್ಕೆ ಅಮೆರಿಕ ವೀಸಾ ಪಡೆಯಲು ಭಾರತೀಯರಿಗೆ ಹೆಚ್ಚಿನ ಸಮಯ ಬೇಕಾಗಬಹುದು ಎಂದು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

Advertisement

ನ.8ರಿಂದ ಮೂರು ಮಿಲಿಯ ಮಂದಿ ಭಾರತೀಯರು ಎರಡು ಡೋಸ್‌ ಲಸಿಕೆ ಪಡೆದ ದಾಖಲೆಗಳ ಸಹಿತ ಪರಿಶೀಲನೆಗೆ ಒಳಗಾಗಬೇಕಾಗಿದೆ. ಹೀಗಾಗಿ, ಅವುಗಳ ಪರಿಶೀಲನಗೆ ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆಗಳು ಇವೆ. ಇದರ ಜತೆಗೆ ಕೊರೊನಾ ಸಂಬಂಧಿತ ಸಮಸ್ಯೆಗಳಿಂದಾಗಿ ವೀಸಾ ನೀಡುವ ದಾಖಲೆಗಳನ್ನು ಪರಿಶೀಲಿಸಲು ಹಿಂದಿನ ಸಂದರ್ಭಗಳಲ್ಲಿ ಅಡ್ಡಿ ಉಂಟಾಗಿತ್ತು. ಅವುಗಳನ್ನೆಲ್ಲ ಪ್ರಸಕ್ತ ಸಾಲಿನಲ್ಲಿ ಸರಿಪಡಿಸಲಾಗುತ್ತದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಜನರು ತಾಳ್ಮೆಯಿಂದಾಗಿ ಕಾಯುತ್ತಿರುವುದಕ್ಕೆ ರಾಯಭಾರ ಕಚೇರಿ ಕೃತಜ್ಞತೆ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊವಿಶೀಲ್ಡ್‌ಗೆ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಅಮೆರಿಕ ಮಾನ್ಯತೆ ನೀಡಿದೆ.

ಇದನ್ನೂ ಓದಿ:ರಾಮನನ್ನು ವಿರೋಧಿಸಿದವರು ನತದೃಷ್ಟದಿಂದ ಬಳಲಿದ್ದಾರೆ: ಯೋಗಿ ಆದಿತ್ಯನಾಥ

Advertisement

Udayavani is now on Telegram. Click here to join our channel and stay updated with the latest news.

Next