Advertisement
ಹೆಜ್ಬುಲ್ಲಾ ಉಗ್ರರಿಗೆ ಪಾಠ ಕಲಿಸಲು 2 ವರ್ಷಗಳ ಹಿಂದೆ ಯೋಜನೆ ರೂಪಿಸಿದ ಮೊಸಾದ್, ಪೇಜರನ್ನು ಅಸ್ತ್ರವಾಗಿ ಬಳಕೆ ಮಾಡಿ ಕೊಂಡಿತು. ಉಗ್ರರು ಪೇಜರ್ ಬಳಸು ವಂತೆ ಮಾಡಲು ಉಗ್ರರ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಹ್ಯಾಕ್ ಮಾಡಲು ಇಸ್ರೇಲ್ ಆರಂಭಿಸಿತು.ಇದರಿಂದ ಹೆದರಿದ ಹೆಜ್ಬುಲ್ಲಾ ಉಗ್ರರು ಪರ್ಯಾಯ ಮಾರ್ಗವನ್ನು ಹುಡುಕಲು ಆರಂಭಿಸಿದರು. ಈ ಸಮಯದಲ್ಲಿ ಮೊಸಾದ್ ಸ್ಫೋಟಕಗಳನ್ನು ತುಂಬಿ ತಯಾರು ಮಾಡಿದ್ದ ಪೇಜರ್‌ಗಳನ್ನು ಹೆಜ್ಬುಲ್ಲಾ ಉಗ್ರರು ಕೊಳ್ಳುವಂತೆ ಮಾಡಿತು.
ಲೆಬನಾನ್‌ನಲ್ಲಿ ಸ್ಫೋಟಗೊಂಡ ಎಆರ್924 ಪೇಜರ್ ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, ತಿಂಗಳು ಗಟ್ಟಲೇ ಚಾರ್ಜ್ ಮಾಡದೇ ಬಳಕೆ ಮಾಡಬಹುದಾಗಿತ್ತು. ಅಲ್ಲದೇ ಇಸ್ರೇಲ್ ಮಾಡುತ್ತಿರುವ ಟ್ರಾಕಿಂಗನ್ನು ಇದು ತಪ್ಪಿಸಿಕೊಳ್ಳುತ್ತದೆ ಎಂದು ಮಾರ್ಕೆಟಿಂಗ್ ಮಾಡಲಾಗಿತ್ತು. ಹೀಗಾಗಿ ಇಸ್ರೇಲ್‌ನಿಂದ ತಪ್ಪಿಸಿಕೊಳ್ಳಲು ಹೆಜ್ಬುಲ್ಲಾ ಉಗ್ರರು ಇದನ್ನು ಆಯ್ಕೆ ಮಾಡಿಕೊಂಡರು. 2023ರ ಆರಂಭದಲ್ಲಿ ಖರೀದಿ
ಪೇಜರ್‌ಗಳನ್ನು ತಯಾರು ಮಾಡುವ ತೈವಾನ್ ಕಂಪೆನಿಯ ಮೂಲಕ ಈ ಪೇಜರ್‌ಗಳನ್ನು ಲೆಬನಾನ್‌ಗೆ ತಲುಪಿಸಲಾಯಿತು. ಅವುಗಳನ್ನು ಮಧ್ಯಮ ನಾಯಕರು ಹಾಗೂ ಹೆಜ್ಬುಲ್ಲಾಗೆ ನೆರವು ಒದಗಿಸುವವರಿಗೆ ನೀಡಲಾಯಿತು. ಲೆಬನಾನ್ ಮತ್ತು ಸಿರಿಯಾಗಳಲ್ಲೂ ಹಂಚಿಕೆ ಮಾಡಲಾಯಿತು. ಆದರೆ ಈ ಪೇಜರ್‌ಗಳನ್ನು ಮೊಸಾದ್ ತಯಾರು ಮಾಡಿದ್ದು ಎಂದು ಹೆಜ್ಬುಲ್ಲಾ ನಾಯಕರಿಗೆ ಅನುಮಾನ ಮೂಡಲಿಲ್ಲ. ಸುಮಾರು 1 ವರ್ಷಗಳ ಕಾಲ ಯಾವುದೇ ಸಮಸ್ಯೆ ಅವುಗಳಲ್ಲಿ ¿ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಪ್ರಮುಖ ನಾಯಕರು ಕೂಡ ಬಳಸಲು ಆರಂಭಿಸಿದ್ದರು.
Related Articles
ಈ ವಿಷಯವನ್ನು ಗುಪ್ತಚರ ಸಂಸ್ಥೆಯ ಮೂಲಕ ತಿಳಿದುಕೊಂಡ ಮೊಸಾದ್ ಸೆ. 17ರಂದು ಒಂದೇ ಬಾರಿ ಸಾವಿರಾರು ಪೇಜರ್‌ಗಳನ್ನು ಸ್ಫೋಟ ಮಾಡಿತು. ಈ ಸ್ಫೋಟದ ಮೂಲಕ ಹಲವರನ್ನು ಬಲಿಪಡೆದು, ಸುಮಾರು 3 ಸಾವಿರ ಉಗ್ರರನ್ನು ಗಾಯಗೊಳಿಸಲಾಗಿದೆ. ಮತ್ತೂಂದು ಅಚ್ಚರಿಯ ವಿಷಯವೆಂದರೆ ಈ ದಾಳಿಯ ಬಗ್ಗೆ ಇಸ್ರೇಲ್‌ನ ಪ್ರಮುಖ ನಾಯಕರಿಗೆ ತಿಳಿದಿರಲಿಲ್ಲ. ಪೇಜರ್ ಸ್ಫೋಟದ ಬಳಿಕ ಬೆಂಜಮಿನ್ ನೆತನ್ಯಾಹು ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮೊಸಾದ್ ಯೋಜನೆ ಹೇಗಿತ್ತು?ಭಾರೀ ಸ್ಫೋಟಕಗಳನ್ನಿಟ್ಟು ಪೇಜರ್‌ಗಳನ್ನು ತಯಾರು ಮಾಡಿದ ಇಸ್ರೇಲ್
ಹೆಜ್ಬುಲ್ಲಾ ಉಗ್ರರು ಪೇಜರ್ ಬಳಕೆ ಮಾಡಲು ವ್ಯವಸ್ಥಿತ ಪ್ರಚೋದನೆ
ಯಾವುದೇ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ 1 ವರ್ಷ ಮೌನ
ಬಳಿಕ ಒಂದೇ ಬಾರಿ ಎಲ್ಲ ಪೇಜರ್‌ಗಳನ್ನು ಸ್ಫೋಟಿಸಿ ಹೆಜ್ಬುಲ್ಲಾಗೆ ಆಘಾತ
ಪೇಜರ್‌ಗಳ ಪೂರೈಕೆಗೆ ತೈವಾನ್ ಮೂಲದ ಕಂಪೆನಿ ಬಳಸಿದ ಮೊಸಾದ್
ಕಂಪೆನಿಗೂ ಶಂಕೆ ಬಂದಿಲ್ಲ, ಇಸ್ರೇಲ್ ಅಗ್ರ ನಾಯಕರಿಗೂ ಮಾಹಿತಿಯಿಲ್ಲ?
ಅಮೆರಿಕ, ಮಿತ್ರ ರಾಷ್ಟ್ರಗಳಲ್ಲಿ ಪೇಜರ್ ತಯಾರಿಸಿರುವ ಸಾಧ್ಯತೆ: ವರದಿ ಮಧ್ಯಪ್ರಾಚ್ಯ ಕದನಕ್ಕೆ ಇಂದಿಗೆ 1 ವರ್ಷ ಇಸ್ರೇಲ್ ಮೇಲೆ ಹಮಾಸ್ ಉಗ್ರರು ಕೈಗೊಂಡ ದಾಳಿಯಿಂದ ಆರಂಭವಾದ ಮಧ್ಯಪ್ರಾಚ್ಯ ಕದನಕ್ಕೆ ಸೋಮವಾರ 1 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಹಮಾಸ್ ಉಗ್ರರು ಮತ್ತೆ ದಾಳಿ ಕೈಗೊಳ್ಳಬಹುದು ಎಂಬ ಕಾರಣಕ್ಕೆ ಇಸ್ರೇಲ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಳೆದ ವರ್ಷ ಅ.7ರಂದು ಹಮಾಸ್ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ ದಾಳಿ ನಡೆಸಿದ್ದರು. ಈ ಸುಮಾರು 1,200 ಮಂದಿ ನಾಗರಿಕರು ಮೃತಪಟ್ಟಿ ದ್ದಲ್ಲದೇ, ಹಮಾಸ್ ಉಗ್ರರು ಹಲವರನ್ನು ಒತ್ತೆಯಾಗಿ ಕರೆದೊಯ್ದಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿದ್ದಲ್ಲದೇ, ಹಲವು ಮಂದಿ ಹಮಾಸ್ ನಾಯಕರನ್ನು ಹತ್ಯೆ ಮಾಡಿತ್ತು. ಇದಾದ ಬಳಿಕ ಹಮಾಸ್ ನಾಯಕರಿಗೆ ಬೆಂಬಲ ನೀಡಿದ ಲೆಬನಾನ್ ಹಾಗೂ ಇರಾನ್ ಮೇಲೂ ದಾಳಿ ಕೈಗೊಂಡಿತ್ತು. ಹೀಗಾಗಿ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿತ್ತು. 1 ವರ್ಷದ ಅವಧಿಯಲ್ಲಿ ಸುಮಾರು 41,000 ಮಂದಿ ಮೃತಪಟ್ಟಿದ್ದಾರೆ. ಬಿಗಿ ಭದ್ರತೆ: ಹಮಾಸ್ ದಾಳಿಗೆ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗಾಜಾಪಟ್ಟಿ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಸಂಭಾವ್ಯ ದಾಳಿಗಳನ್ನು ತಡೆಗಟ್ಟಲು ಇಸ್ರೇಲ್ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಗಡಿ ಪ್ರದೇಶದಲ್ಲಿ ಟ್ಯಾಂಕರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೆಜ್ಬುಲ್ಲಾ ಮೇಲೆ ಹೆಚ್ಚು ಗಮನ: ಹಮಾಸ್ ದಾಳಿಯ ಬಳಿಕ ಇಸ್ರೇಲ್ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಹೆಚ್ಚಿನ ದಾಳಿ ನಡೆಸಿದೆ. ಪ್ರಸ್ತುತ ಸಹ ಲೆಬನಾನ್‌ನಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆ ಕೈಗೊಂಡಿದೆ. ಹೀಗಾಗಿ ಗಾಜಾ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಸ್ರೇಲ್ ಮೇಲೆ ಹಮಾಸ್ ಡ್ರೋನ್ ದಾಳಿ
ಹಮಾಸ್ ದಾಳಿಗೆ 1 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಹಮಾಸ್ ಉಗ್ರರು ಶನಿವಾರ ಇಸ್ರೇಲ್ ಮೇಲೆ ಮತ್ತೂಮ್ಮೆ ಡ್ರೋನ್ ದಾಳಿ ನಡೆಸಿದ್ದಾರೆ. ಆದರೆ ಎಲ್ಲ ಡ್ರೋನ್‌ಗಳು ಖಾಲಿ ಪ್ರದೇಶದಲ್ಲಿ ಬಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ. ಇದೇ ವೇಳೆ ಗಾಜಾದಲ್ಲಿರುವ ಮಸೀದಿ ಹಾಗೂ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 26 ಮಂದಿ ಹತರಾಗಿದ್ದಾರೆ ಎಂದು ಗಾಜಾದಲ್ಲಿರುವ ಹಮಾಸ್ ಆಡಳಿತ ಹೇಳಿದೆ. ಈ ವಾರ ಯುದ್ಧ ಇನ್ನಷ್ಟು ತೀವ್ರ?
ಅಮೆರಿಕ ಸೇರಿ ಹಲವು ರಾಷ್ಟ್ರಗಳು ಯುದ್ಧ ಮುಂದುವರಿಸ ದಂತೆ ಒತ್ತಡ ಹೇರುತ್ತಿದ್ದರೂ ಇಸ್ರೇಲ್ ತಲೆಕೆಡಿಸಿಕೊಂಡಿಲ್ಲ. ಈ ಬೆನ್ನಲ್ಲೇ ಇಸ್ರೇಲ್-ಪ್ಯಾಲೆಸ್ತೀನ್ ಕದನಕ್ಕೆ 1 ವರ್ಷ ಭರ್ತಿ ಯಾಗಿದೆ. ಹೀಗಾಗಿ ಈ ವಾರ ಯುದ್ಧ ಇನ್ನಷ್ಟು ತೀವ್ರ ವಾಗ ಬಹುದು ಎಂದು ರಕ್ಷಣ ತಜ್ಞರು ಎಚ್ಚರಿಸಿದ್ದಾರೆ. ಇರಾನ್ ಅಣ್ವಸ್ತ್ರ ಸ್ಥಾವರಗಳ ಇಸ್ರೇಲ್ ದಾಳಿ ನಡೆಸಬಹುದು ಎಂಬ ಊಹೆಯಿದೆ. ಪ್ಯಾಲೆಸ್ತೀನ್ ಪರ ಪ್ರತಿಭಟನೆ: ಬೆಂಕಿ ಹಚ್ಚಿಕೊಂಡ ಪತ್ರಕರ್ತ!
ವಾಷಿಂಗ್ಟನ್: ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧ ಅಂತ್ಯಗೊಳಿಸಿ ಎಂದು ಅಮೆರಿಕದಾದ್ಯಂತ ಪ್ರತಿಭಟನೆಗಳು ನಡೆದಿವೆ. ಶ್ವೇತ ಭವನದ ಎದುರು ನಡೆದ ಪ್ರತಿಭಟನೆಯಲ್ಲಿ, ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದ ಫೋಟೋ ಜರ್ನಲಿಸ್ಟ್ ಒಬ್ಬರು “ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು’ ಎಂದು ಘೋಷಣೆ ಕೂಗೂತ್ತಾ ದೇಹಕ್ಕೆ ಬೆಂಕಿ ಹಚ್ಚಿಕೊಂಡಿದ್ದಾರೆ. ಇಸ್ರೇಲ್ ವಿರೋಧಿಸಿದ ಪಾಶ್ಚಾತ್ಯರಿಗೆ ನಾಚಿಕೆ ಆಗಬೇಕು: ನೆತನ್ಯಾಹು
ಲೆಬನಾನ್ ಮತ್ತು ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಕೈಗೊಳ್ಳುತ್ತಿರುವ ದಾಳಿಯನ್ನು ವಿರೋಧಿಸಿದ ವಿವಿಧ ದೇಶದ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಛೀಮಾರಿ ಹಾಕಿದ್ದಾರೆ. ಫ್ರಾನ್ಸ್ ಸೇರಿದಂತೆ ಹಲವು ಪಾಶ್ಚಾತ್ಯ ದೇಶಗಳು ಇಸ್ರೇಲ್ ನಡೆಯನ್ನು ವಿರೋ ಧಿಸಿವೆ. ಒಂದು ವೇಳೆ ಹಮಾಸ್, ಹೆಜ್ಬುಲ್ಲಾ, ಹೌತಿ ಉಗ್ರರು ಒಂದಾದರೆ ಇಸ್ರೇಲ್ ಮೇಲೆ ಅವರು ಬಹು ದೊಡ್ಡ ದಾಳಿ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಇದು ಅತ್ಯಂತ ಅಪಾಯಕಾರಿ ವಾರ: ರಕ್ಷಣ ತಜ್ಞರ ಎಚ್ಚರಿಕೆ
ಗಾಜಾ, ಲೆಬನಾನ್ ಮತ್ತು ಇಸ್ರೇಲ್ ನಡುವಿನ ಬಿಕ್ಕಟ್ಟು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರವನ್ನು ಅತ್ಯಂತ ಅಪಾಯಕಾರಿ ವಾರ ಆಗಬಹುದು ಎಂದು ರಕ್ಷಣ ತಜ್ಞರು ಎಚ್ಚರಿಸಿದ್ದಾರೆ. ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತಿದಾಳಿ ನಡೆಸಿದ್ದು, ಇರಾನ್‌ನ ಅಣ್ವಸ್ತ್ರ ಕೇಂದ್ರಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎನ್ನಲಾಗಿದ್ದು, ಇದು ಭಾರೀ ಸಮಸ್ಯೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದೀಗ ಈ ಯುದ್ಧಕ್ಕೆ ಅಮೆರಿಕ ಸಹ ಪ್ರವೇಶಿ ಸಿದ್ದು, ಯುದ್ಧ ಹೆಚ್ಚುವ ಭೀತಿಯನ್ನುಂಟು ಮಾಡಿದೆ. ಅಮೆರಿಕ, ಯು.ಕೆ. ಸೇರಿ ಹಲವು ರಾಷ್ಟ್ರಗಳು ಯುದ್ಧ ಸನ್ನಿವೇಶ ಮುಂದುವರಿಸದಂತೆ ಒತ್ತಡ ಹೇರುತ್ತಿದ್ದರೂ ಇರಾನ್, ಗಾಜಾ, ಹಮಾಸ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ.