Advertisement

ಸೊಳ್ಳೆ ಉತ್ಪಾದನ ಕೇಂದ್ರ: ಕಾಯಿಲೆ ಹರಡುವ ಭೀತಿ

12:13 AM May 16, 2020 | Sriram |

ಪುತ್ತೂರು: ತಾ|ನ ಬೆಟ್ಟಂಪಾಡಿ, ಬಲಾ°ಡು ಹಾಗೂ ಪಾಣಾಜೆ ಪ್ರದೇಶಗಳಲ್ಲಿ ಡೆಂಗ್ಯೂ, ಮಲೇರಿಯಾ ಜ್ವರಗಳಿಂದ ಜನತೆ ಹೈರಾಣಾಗುತ್ತಿದ್ದಾರೆ. ಇಷ್ಟಾದರೂ ತಾಲೂಕಿನ ಬೊಳುವಾರು, ಉಪ್ಪಿನಂಗಡಿ ಸಹಿತ ವಿವಿಧ ಭಾಗಗಳಲ್ಲಿ ಇರುವ ಈ ಸೊಳ್ಳೆ ಉತ್ಪಾದನ ಕೇಂದ್ರಗಳ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಳ್ಳದೆರುವುದು. ಕಾಯಿಲೆ ಹರಡುವ ಭೀತಿ ಇನ್ನಷ್ಟು ಹೆಚ್ಚಸಿದೆ.

Advertisement

ಬೊಳುವಾರು ಭಾಗದಲ್ಲಿ ಉಪ್ಪಿನಂಗ-ಪುತ್ತೂರು ನಡುವಣ ರಸ್ತೆ ಪಕ್ಕವೇ ಗುಜರಿ ಸಾಮಾನು ಖರೀದಿಸುವ ಕೇಂದ್ರ, ಉಪ್ಪಿನಂಗಡಿ-ಕಡಬ ರಸ್ತೆಯ ಮಠ ಕೊಪ್ಪಳದಲ್ಲಿ ಗುಜರಿ ಸಾಮಾನು ಖರೀದಿಸುವ ಕೇಂದ್ರಗಳಿವೆ. ಇಲ್ಲಿ ಬಿಯರ್‌ ಬಾಟಲ್‌, ಟಯರ್‌, ಪ್ಲಾಸ್ಟಿಕ್‌, ಕಬ್ಬಿಣದ ವಸ್ತುಗಳನ್ನು ರಾಶಿ ಹಾಕಲಾಗಿದೆ. ಡೆಂಗ್ಯೂಗೆ ಕಾರಣ ವಾಗುವ ಈಡಿಸ್‌, ಮಲೇರಿಯಾಕ್ಕೆ ಕಾರಣವಾಗುವ ಅನಾಫಿಲೀಸ್‌ ಸೊಳ್ಳೆ ಉತ್ಪತ್ತಿಯಾಗಲು ಕೇವಲ 10 ಎಂಎಲ್‌ ನೀರು ಸಾಕಾಗುತ್ತದೆ. ಇಲ್ಲಿ ರಾಶಿ ಹಾಕಲಾದ ಗುಜರಿ ಸಾಮಾನುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪಾದನೆಯಾಗುವ ಸಾಧ್ಯತೆ ಹೆಚ್ಚಿದೆ.

ಮಲೇರಿಯಾ ನಿಯಂತ್ರಣ ಇಲಾಖೆಯ ವೆಂಕಟೇಶ್‌ ಹುದ್ದಾರ್‌, ಸಿಬಂದಿ ಈ ಸ್ಥಳಗಳ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ಒಂದೆರಡು ವಾರ ಕಳೆದಿದೆ. ಆದರೂ ಪುತ್ತೂರಿನ ನಗರಸಭೆ, ಉಪ್ಪಿ ನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಈ ಗುಜರಿ ಸಂಗ್ರಹ ಕೇಂದ್ರಗಳನ್ನು ತೆರವುಗೊಳಿಸುವ ಕೆಲಸ ಇನ್ನೂ ನಡೆದಿಲ್ಲ.

ಡೆಂಗ್ಯೂ- ಮಲೇರಿಯಾದ ಹರಡದಂತೆ ಮಳೆ ಆರಂಭದಲ್ಲಿಯೇ ಸೊಳ್ಳೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮಕರಣಿಕರಿಗೆ ಮಾಹಿತಿ ನೀಡಿದ್ದರು. ಆದರೂ ಅಧಿಕಾ ರಿಗಳು ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ.

ತತ್‌ಕ್ಷಣ ಕ್ರಮ
ಬೊಳುವಾರು ಬಳಿಯಲ್ಲಿರುವ ಗುಜರಿ ಸಂಗ್ರಹ ಕೇಂದ್ರಕ್ಕೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾ ಗಿದೆ. ಆದರೆ ಇಲ್ಲಿ ಬಾಟಲಿಗಳನ್ನು ರಾಶಿ ಹಾಕಿರುವುದು, ನೀರು ನಿಲ್ಲುವಂತಹ ಸ್ಥಿತಿ ಬಗ್ಗೆ ನಗರಸಭೆ ಆರೋಗ್ಯ ಇಲಾಖೆ ಸಿಬಂದಿ ಕಳುಹಿಸಿ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ. ಮಾಲಕರು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
 -ರೂಪಾ ಶೆಟ್ಟಿ, ನಗರಸಭಾ ಪೌರಾಯುಕ್ತೆ ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next