Advertisement

ಸೊಳ್ಳೆ ಕಾಟ ಎಂದು 4 ಮರ ಕಡಿದ್ರು!

03:31 PM Oct 17, 2020 | Suhan S |

ನಂಜನಗೂಡು: ನಗರದ ರಾಷ್ಟ್ರಪತಿ ರಸ್ತೆಯಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ಇದ್ದ ನಾಲ್ಕು ಬೃಹತ್‌ ಮರಗಳನ್ನು ಕಡಿದುರುಳಿಸಲಾಗಿದೆ. ನಾಗಮ್ಮ ಶಾಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಸಿರು ಹೊದಿಕೆಯಾಗಿದ್ದ ಮರಗಳನ್ನು ಹನನ ಮಾಡಿರುವುದರಿಂದಈಪ್ರದೇಶವು ಬಯಲು ಬಯಲಾಗಿ ಕಾಣುತ್ತಿದೆ.

Advertisement

ಸೊಳ್ಳೆ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಮರಗಳನ್ನು ಕಡಿದಿದ್ದೇವೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರೆ. ಆದರೆ, ಈ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆದಿಲ್ಲ. ಹೀಗಾಗಿ ಈ ಕುರಿತು ಪ್ರಕರಣ ದಾಖಲಿಸುತ್ತೇವೆ ಎಂದು ಅರಣ್ಯ ಇಲಾಖೆಎಚ್ಚರಿಕೆ ನೀಡಿದೆ. ನಂಜನಗೂಡಿನ ಲಯನ್ಸ್‌ ಹಾಗೂ ರೋಟರಿ ಸಂಸ್ಥೆ ಹಲವಾರು ವರ್ಷಗಳ ಹಿಂದೆ ಇಲ್ಲಿ ಮರಗಳನ್ನು ನೆಟ್ಟು ಬೆಳೆಸಿತ್ತು. ಆದರೆ, ಇದೀಗ ಕಾಲೇಜು ಅಭಿವೃದ್ದಿ ಸಮಿತಿಯು ಹೊಂಗೆ, ಭಾಗೆ ಸೇರಿದಂತೆ ನಾಲ್ಕು ಮರಗಳನ್ನುಕಡಿದು ಹಾಕಿದೆ.

ನಿಯಮ ಪಾಲಿಸಿಲ್ಲ: ಮರಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಆಮರಗಳ ಬೆಲೆ ನಿರ್ಧಾರವಾಗಬೇಕು. ಆ ಮೌಲ್ಯದ ಶೇ.12ರಷ್ಟು ಹಣವನ್ನು ಅರಣ್ಯ ಇಲಾಖೆಗೆ ಪಾವತಿಸಿದ ನಂತರ ಅನುಮತಿ ಪಡೆದು ಮರಗಳನ್ನು ಕಡಿಬೇಕು ಎಂಬ ಕಾನೂನು ಇದೆ. ಆದರೆ, ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮರಗಳನ್ನು ಕಡಿಯಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಯಾವ ಉದ್ದೇಶಕ್ಕೆ ಈ ಬೃಹತ್‌ ಮರಗಳನ್ನು ಕಡಿಯಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ದೊರೆತಿಲ್ಲ. ಸೊಳ್ಳೆ ನಿಯಂತ್ರಣಕ್ಕಾಗಿ ಮರಗಳ ಹನನ ಮಾಡಿದ್ದೇವೆ ಎಂದು ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ತಿಳಿಸಿದ್ದಾರೆ. ಆದರೆ, ಮರಗಳ ಮೌಲ್ಯ ಎಷ್ಟು? ಮರ ಕಡಿಯಲು ಅನುಮತಿ ಪಡೆಯಲಾಗಿದೇಯೇ, ಈ ಹಣ ಯಾರ ಪಾಲಾಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಮರಗಳ ಕಡಿಯುವ ಕುರಿತು ಕಾಲೇಜಿನಿಂದ ನಮಗೆಯಾವುದೇಪ್ರಸ್ತಾವನೆಯೇ ಬಂದಿಲ್ಲ. ಸರ್ಕಾರಿ ಶಿಕ್ಷಣಸಂಸ್ಥೆಯೇಕಾನೂನು ಬಾಹಿರವಾಗಿ ಮರ ಕಡಿದಿರುವುದು ಅಪರಾಧವಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗುವುದು. -ರಕ್ಷಿತಾ, ವಲಯ ಅರಣ್ಯಾಧಿಕಾರಿ

Advertisement

ಕಾಲೇಜಿನ ವಿದ್ಯಾರ್ಥಿಗಳಗೆ ಸೊಳ್ಳೆಕಾಟ ಹೆಚ್ಚಾಗಿದೆ. ಅದಕ್ಕಾಗಿಯೇ ಬೆಳೆದು ನಿಂತ ನಾಲ್ಕು ಮರಗಳನ್ನು ನಮ್ಮಕಾಲೇಜು ಅಭಿವೃದ್ಧಿ ಸಮಿತಿಯವರುಕಡಿಸಿದ್ದಾರೆ. ಮತ್ತೆ ಸಸಿ ನೆಟ್ಟು ಬೆಳೆಸಲಾಗುವುದು. –ಶಂಕರನಾರಾಯಣ, ಕಾಲೇಜು ಪ್ರಾಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next