Advertisement

ಹಿಂದೂ ತಾಲಿಬಾನ್‌ ಪದ ವಿರುದ್ಧ ವಕೀಲರ ಹೈಡ್ರಾಮಾ

06:00 AM Jul 21, 2018 | Team Udayavani |

ನವದೆಹಲಿ: ಮಸೀದಿ ಎನ್ನುವುದು ಇಸ್ಲಾಂನ ಅವಿಭಾಜ್ಯ ಅಂಗ ಎಂದು 1994ರಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಶುಕ್ರವಾರ ಹೈಡ್ರಾಮಾ ನಡೆದಿದೆ.

Advertisement

ಮುಸ್ಲಿಂ ಸಂಘಟನೆಗಳ ಪರ ವಾದಿಸಿದ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌, “ತಾಲಿಬಾನ್‌ಗಳು ಬಾಮಿಯಾನ್‌ ಬುದ್ಧನನ್ನು ನಾಶಗೊಳಿಸಿದರು. ಹಿಂದೂ ತಾಲಿಬಾನ್‌ಗಳು ಬಾಬರಿ ಮಸೀದಿ ಧ್ವಂಸಗೊಳಿಸಿದರು’ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಅದಕ್ಕೆ ನೀವು ದೇಗುಲಗಳನ್ನು ನಾಶಪಡಿಸಿದಿರಿ ಎಂದು ಹಿಂದೂ ಸಂಘಟನೆಗಳ ಪರ ವಕೀಲ ಹರಿಶಂಕರ್‌ ಜೈನ್‌ ತಿರುಗೇಟು ನೀಡಿದರು. ಧವನ್‌ ತಮ್ಮ ಹೇಳಿಕೆ ಹಿಂಪಡೆಯಬೇಕೆಂದು ಒತ್ತಾಯಿಸಿದರೂ, ಅದಕ್ಕೊಪ್ಪಲಿಲ್ಲ. ಈ ಸಂದರ್ಭದಲ್ಲಿ ಮತ್ತೂಬ್ಬ ನ್ಯಾಯವಾದಿ ಧವನ್‌ರತ್ತ ಧಾವಿಸಿದರು. ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಅವರನ್ನು ಕೋರ್ಟ್‌ ಹಾಲ್‌ನಿಂದ ಹೊರಕ್ಕೆ ಕಳುಹಿಸಿದರು. ಇಂಥ ಮಾತುಗಳನ್ನು ಕೋರ್ಟ್‌ನಲ್ಲಿ ಹೇಳಬಾರದು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರಾ ಧವನ್‌ಗೆ ಸೂಚಿಸಿದರು. ಈ ಹೈಡ್ರಾಮಾದ ಬಳಿಕ ಸಿಜೆಐ ಮಿಶ್ರಾ ನೇತೃತ್ವದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿ, ಜು.22ಕ್ಕೆ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next