Advertisement

ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಕೋವಿಡ್ ಸೋಂಕಿನಿಂದ ಸಾವು

11:12 AM May 08, 2021 | Team Udayavani |

ನವದೆಹಲಿ : ಒಲಿಂಪಿಕ್ ಚಿನ್ನದ ಪದಕ ವಿಜೇತ,  ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಮಾರಕ ಕೋವಿಡ್ ಸೋಂಕಿನಿಂದ ಶನಿವಾರ ಬೆಳಗ್ಗೆ ಸಾವನಪ್ಪಿದ್ದಾರೆ.

Advertisement

ರವೀಂದರ್ ಪಾಲ್ ಸೋಂಕಿನಿಂದ ಬಳಲಿದ್ದು ಕಳೆದ ಏಪ್ರಿಲ್ 24ರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು.  ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ರವೀಂದರ್ ಕುಟುಂಬದ ಮೂಲಗಳು ತಿಳಿಸಿವೆ.

ಆದರೆ ಶುಕ್ರವಾರ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟ ಕಾರಣ ಅವರಿಗೆ ವೆಂಟಿಲೇಟರ್‌ ಅಳವಡಿಲಾಯಿತು ಎಂದು ತಿಳಿಸಲಾಗಿದೆ.

ಪಾಲ್ 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ನಲ್ಲಿಯೂ ಆಡಿದ್ದರು. ಇವರು ಮದುವೆಯಾಗದ ಕಾರಣ ಸೊಸೆ ಪ್ರಜ್ಞಾ ಯಾದವ್ ಜೊತೆ ಉಳಿದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next