ನವದೆಹಲಿ: ಕೇಂದ್ರ ಸರ್ಕಾರ ಕೈಗೊಂಡ ಬಿಗಿ ಕ್ರಮಗಳಿಂದ ಮತ್ತು ಸಂಬಂಧಿತ ಇಲಾಖೆಗಳ ಮುತುವರ್ಜಿ ಯಿಂದಾಗಿ ದೇಶದಲ್ಲಿ ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳಿಗೆ ಸೇರಲು ಪ್ರೋತ್ಸಾಹ ನೀಡುವ ಪ್ರಕರಣಗಳು ಗಣನೀಯವಾಗಿ ತಗ್ಗಿದೆ.
ಹೀಗೆಂದು ಕೇಂದ್ರ ಗೃಹ ಖಾತೆ ಸಹಾಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಗೆ ತಿಳಿಸಿದ್ದಾರೆ.
ಉಗ್ರ ಕೃತ್ಯವೆಸಗಲು ಮತ್ತು ಅಂಥ ಸಂಘಟನೆಗಳ ಬಗ್ಗೆ ಸೇರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ಪಿತೂರಿಗಳು ನಡೆದಿದ್ದರೂ, ಅದರ ಪ್ರಭಾವ ಅತ್ಯಲ್ಪ ಎಂದವರು ತಿಳಿಸಿದ್ದಾರೆ.
ಐಸಿಸ್, ಅಲ್ ಖೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಜಗತ್ತಿನಲ್ಲಿ ಯುವಕರನ್ನು ಹಿಂಸಾ ಕೃತ್ಯಗಳನ್ನು ನಡೆಸಲು ಪ್ರೇರಣೆ ನಡೆಸುತ್ತಿವೆ. ಅದನ್ನು ಎದುರಿಸುವುದೂ ಒಂದು ಸವಾಲಿನ ಕೆಲಸ ಎಂದು ಹೇಳಿದ್ದಾರೆ.
2020ಕ್ಕೆ ಹೋಲಿಕೆ ಮಾಡಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ 2021ರಲ್ಲಿ ನಾಗರಿಕರ ಸಾವು ಕೊಂಚ ಏರಿಕೆಯಾಗಿದೆ ಎಂದು ಹೇಳಿದ್ದಾರೆ.