Advertisement

ಮುಂಜಾನೆಯ ಅಭ್ಯಾಸ ಡಯಟ್‌ಗೆ ಪೂರಕ

04:51 AM Feb 05, 2019 | |

ದೇಹದ ತೂಕ ಇಳಿಸಲು ಉತ್ತಮ ಸಮಯ ಯಾವುದೆಂದು ತಜ್ಞರನ್ನು ಕೇಳಿದರೂ ಸಿಗುವ ಉತ್ತರ ಬೆಳಗ್ಗಿನ ಜಾವ. ಏಕೆಂದರೆ ಆ ಹೊತ್ತಿನಲ್ಲಿ ನಮ್ಮ ಚಯಾಪಚಯ ಕ್ರಿಯೆ ವೇಗವಾಗಿ ನಡೆಯುತ್ತಿರುತ್ತದೆ. ಇದರಿಂದ ಆ ಸಮಯದಲ್ಲಿ ಏನೇ ತಿಂದರೂ ಬೇಗನೆ ಜೀರ್ಣಗೊಳ್ಳುತ್ತದೆ. ಇದರೊಂದಿಗೆ ದಿನಕ್ಕೆ ಬೇಕಾದ ಶಕ್ತಿಯನ್ನು ನೀಡುವ ಕ್ಯಾಲೊರಿಗಳು ಉತ್ಪತ್ತಿಯಾಗುತ್ತವೆ. ನೈಸರ್ಗಿಕವಾಗಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ಬಹಳಷ್ಟು ವಿಧಾನಗಳಿವೆ. ಇವುಗಳಲ್ಲಿ ಒಂದು ಬೆಳಗ್ಗಿನ ಉಪಾಹಾರ. ಇದರೊಂದಿಗೆ ದೇಹ ತೂಕ ಇಳಿಸುವ ಗಿಡಮೂಲಿಕೆಗಳ ಅಥವಾ ಮಸಾಲೆಗಳ ಆಹಾರಗಳನ್ನು ಸೇವಿಸಿ ದೇಹದ ತೂಕವನ್ನು ಸಮತೋಲನಕ್ಕೆ ತರಬಹುದು.

Advertisement

ಸಮರ್ಥವಾಗಿ ದೇಹದ ತೂಕ ಇಳಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿವೆ. ಆರೋಗ್ಯಕರ ಡಯೆಟ್ ಪಾಲಿಸಿ ದೇಹದ ತೂಕವನ್ನು ಇಳಿಸಿ.

• ಫೈಬರ್‌-ಪ್ರೊಟೀನ್‌ ಯುಕ್ತ ಉಪಾಹಾರವಿರಲಿ
ಫೈಬರ್‌ ಅಂಶ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಧ್ಯಾಹ್ನದ ಭೋಜನದ ವರೆಗೆ ಹಸಿವಾಗದಂತೆ ತಡೆಯುತ್ತದೆ. ಈ ನಡುವೆ ಸಕ್ಕರೆ, ಜಿಡ್ಡು ಅಥವಾ ಕೊಬ್ಬಿನ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಇದು ಹಸಿವಿನ ಹಾರ್ಮೋನ್‌ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಪ್ರೊಟೀನ್‌ ಅಂಶ ದೊರೆಯುವ ಆಹಾರದಲ್ಲಿ ಮೊಟ್ಟೆಯೂ ಒಂದು. ಹೀಗಾಗಿ ಉಪಾಹಾರದಲ್ಲಿ ಮೊಟ್ಟೆಯನ್ನು ಬಳಸಬಹುದು. ಅಲ್ಲದೇ ಉಪಾಹಾರದಲ್ಲಿ ಬಾದಾಮಿ, ಚಿಯಾ, ಅಗಸೆ ಬೀಜ ಮುಂತಾದ ಒಣಹಣ್ಣುಗಳು, ಬೀಜಗಳನ್ನು ಬಳಸಬಹುದು. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

••ನೀರಿನ ಬಾಟಲಿ ಎಂದಿಗೂ ತುಂಬಿರಲಿ
ಎಲ್ಲಿಗೆ ಹೋದರೂ ಸಂಗಾತಿಯಾಗಿ ನೀರಿನ ಬಾಟಲಿ ಇರುವುದು ಅಗತ್ಯ. ಕೆಲವೊಮ್ಮೆ ಮೆದುಳು ದಾಹದ ಸಂಕೇತಗಳನ್ನು ಹಸಿವಿನಿಂದ ಗೊಂದಲಗೊಳಿಸುತ್ತದೆ. ಇದಕ್ಕಾಗಿ ಏನಾದರೂ ತಿನ್ನ್ನಬೇಕು ಎಂದು ಅನಿಸುತ್ತದೆ. ಹೀಗೆ ಪದೇ ಪದೆ ಹಸಿವು ಎಂದೆನಿಸಿದಾಗ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಆಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಬರೇ ನೀರು ಕುಡಿಯಲು ಇಷ್ಟವಾಗದಿದ್ದರೇ ತೂಕ ಇಳಿಸುವಿಕೆಗೆ ನೆರವಾಗುವ ಜೀರಿಗೆ, ಪುದೀನಾ, ಅಜೈನ್‌ ಅಥವಾ ಸೌತೆಕಾಯಿಗಳಂತಹ ತಾಜಾ ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ತೂಕ ಇಳಿಸಲೇಬೇಕು ಎಂದು ಅಂದುಕೊಳ್ಳುವವರು ಸರಿಯಾದ ಡಯೆಟ್ ಪಾಲನೆ ಮಾಡುವುದು ಕೂಡ ಅಗತ್ಯ. ಮೇಲೆ ಹೇಳಿರುವ ಸಲಹೆಗಳನ್ನು ಪಾಲಿಸಿದರೆ ಒಂದು ಉತ್ತಮ ಆರಂಭ ಪಡೆಯಲು ಸಾಧ್ಯ. ಬೆಳಗ್ಗಿನ ಸಮಯವನ್ನು ಆರೋಗ್ಯಕರ ಡಯೆಟ್ ಪಾಲನೆಗೆ ಮುಡಿಪಾಗಿಟ್ಟರೇ ದೇಹದ ತೂಕವನ್ನು ನೈಸರ್ಗಿಕವಾಗಿ ಇಳಿಸಿಕೊಳ್ಳಬಹುದು.

Advertisement

ದಿನವನ್ನು ಉಗುರು ಬೆಚ್ಚನೆಯ ನೀರು ಹಾಗೂ ಜೇನಿನೊಂದಿಗೆ ಆರಂಭಿಸಿ
ಉಗುರು ಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ದಿನ ಆರಂಭವಿಸುವುದು ಭಾರತ ಹಾಗೂ ಚೀನದಲ್ಲಿ ಸರ್ವೇ ಸಾಮಾನ್ಯ. ಇದಕ್ಕೆ ಜೇನುತುಪ್ಪ ಅಥವಾ ನಿಂಬೆರಸವನ್ನು ಬೆರೆಸುವುದು ಕೂಡ ಉತ್ತಮ. ಈ ಅಭ್ಯಾಸ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಪಾನೀಯ ಚಯಾಪಚಯ ಕ್ರಿಯೆ, ಕರುಳನ್ನು ಶುದ್ಧವಾಗಿರಿಸಲು ಸಹಕಾರಿಯಾಗಿದೆ. ನಿಂಬೆ ಅತಿ ಹೆಚ್ಚು ಪ್ರಮಾಣದಲ್ಲಿ ಫೈಬರ್‌ ಅಂಶ ಹೊಂದಿರುವುದರಿಂದ ಇದಕ್ಕೆ ಜೇನುತುಪ್ಪ ಬೆರೆಸಿದರೆ ಹೊಟ್ಟೆ ತುಂಬುತ್ತದೆ. ಹಾಗೂ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಇದು ತೂಕ ಇಳಿಸುವಿಕೆಗೆ ನೆರವಾಗುತ್ತದೆ. ಇಲ್ಲಿ ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ನೀರು ಹೆಚ್ಚು ಬಿಸಿಯಾಗಿರಬಾರದು. ತುಂಬಾ ಬಿಸಿ ನೀರು ದೇಹದ ಕಾರ್ಯಕ್ಕೆ ಆಘಾತ ನೀಡುತ್ತದೆ.

•••ರಿಯಾ

Advertisement

Udayavani is now on Telegram. Click here to join our channel and stay updated with the latest news.

Next