Advertisement
ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ಇದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಾಗಿ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ನುಗ್ಗೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ ಅಂಶವು ಹೆಚ್ಚಾಗಿದೆ.
ಬೇಕಾಗುವ ಸಾಮಗ್ರಿಗಳು
ನುಗ್ಗೆ ಕಾಯಿ-2,ಗೋಧಿ ಹಿಟ್ಟು-1ಕಪ್, ಬಿಳಿ ಎಳ್ಳು-2 ಚಮಚ,ಕೊತ್ತಂಬರಿ ಪುಡಿ-1ಚಮಚ, ಮೆಣಸಿನ ಪುಡಿ(ಖಾರದ ಪುಡಿ)-2 ಚಮಚ, ಹಿಂಗು- ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ, ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ-1, ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಆಮ್ಚೂರ್ ಪುಡಿ-ಸ್ವಲ್ಪ, ಅರಶಿನ ಪುಡಿ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
Related Articles
-ಮೊದಲಿಗೆ ನುಗ್ಗೆಯನ್ನು ಸ್ವಚ್ಛವಾಗಿ ತೊಳೆದು,ಚೆನ್ನಾಗಿ ಬೇಯಿಸಿಕೊಳ್ಳಿ.ನಂತರ ಬೇಯಿಸಿದ ನುಗ್ಗೆಯನ್ನು ಹಿಸುಕಿ ರಸವನ್ನು ತೆಗೆದುಕೊಳ್ಳಿ.
-ಒಂದು ಪಾತ್ರೆಗೆ ನುಗ್ಗೆಯ ರಸವನ್ನು ಹಾಕಿ ಅದಕ್ಕೆ ಗೋಧಿ ಹಿಟ್ಟು,ಮೆಣಸಿನ ಪುಡಿ,ಕೊತ್ತಂಬರಿ ಪುಡಿ,ಆಮ್ಚೂರ್ ಪುಡಿ, ಹಿಂಗು,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ನಂತರ ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ,ಬಿಳಿ ಎಳ್ಳು ,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಪುನಃ ಮಿಶ್ರಣ ಮಾಡಿಕೊಳ್ಳಿ.
-ಆಬಳಿಕ ಅಗತ್ಯಕ್ಕೆ ಅನುಗುಣವಾಗಿ ನೀರು ಸೇರಿಸಿ(ಬೇಕಿದ್ದರೆ ಮಾತ್ರ) ಹಿಟ್ಟನ್ನು ಮೃದುವಾಗಿ ಬೆರೆಸಿಕೊಳ್ಳಿ ನಂತರ ಸ್ವಲ್ಪ ಸಮಯ ಹಾಗೇ ಬಿಡಿ.
-ತದನಂತರ ಹಿಟ್ಟನ್ನು ಉಂಡೆ ಮಾಡಿ ನಿಮಗೆ ಬೇಕಾಗುವ ಆಕಾರದಲ್ಲಿ ಲಟ್ಟಿಸಿರಿ.ಲಟ್ಟಿಸುವಾಗ ಸ್ವಲ್ಪ ಎಣ್ಣೆಯನ್ನು ಹಾಕಿ ಲಟ್ಟಿಸಿರಿ.
-ನಂತರ ಕಾದ ತವಾದ ಮೇಲೆ ಹಾಕಿಕೊಂಡು ಎಣ್ಣೆಯಿಂದ ಕಾಯಿಸಿರಿ.ಪರೋಟ ಕೆಂಪಗಾದ ಮೇಲೆ ತವಾದ ಮೇಲಿಂದ ತೆಗೆಯಿರಿ.
-ಬಿಸಿ-ಬಿಸಿ ಇರುವಾಗಲೇ ತಿನ್ನಲು ಬಲು ರುಚಿಯಾಗಿರುತ್ತದೆ ನುಗ್ಗೆಕಾಯಿ ಪರೋಟ.
Advertisement
-ಶ್ರೀರಾಮ್ ಜಿ. ನಾಯಕ್