Advertisement

ಸಂಪತ್ತಿಗಿಂತ ನಮ್ಮನ್ನು ಪ್ರೀತಿಸುವವರಿಗೆ ಹೆಚ್ಚು ಮೌಲ್ಯ

09:48 AM Jun 27, 2020 | mahesh |

ರಾಮನಹಳ್ಳಿ ಎಂಬ ಸಣ್ಣದೊಂದು ಗ್ರಾಮ. ಅಲ್ಲಿ ಲಕ್ಷ್ಮಮ್ಮ ಎಂಬಾಕೆ ತನ್ನ ಪುಟ್ಟ ಸಂಸಾರದೊಂದಿಗೆ ವಾಸವಾಗಿದ್ದಳು. ಗಂಡ ಹೆಂಡತಿ ಅನ್ಯೋನ್ಯವಾಗಿ ಒಬ್ಬರಿಗೊಬ್ಬರು ತುಂಬಾ ಪ್ರೀತಿಯಿಂದ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಬಡವರಾಗಿದ್ದರೂ ನೆಮ್ಮದಿಯಿಂದಿದ್ದರು. ಆದರೆ ಆಕಸ್ಮಾತಾಗಿ ಲಕ್ಷ್ಮಮ್ಮ ತನ್ನ ಗಂಡನನ್ನು ಕಳೆದುಕೊಂಡಳು. ಇದರಿಂದ ತುಂಬಾ ದುಃಖೀತಳಾದ ಲಕ್ಷ್ಮಮ್ಮ ತನ್ನ ಗಂಡನ ನೆನಪಿನಲ್ಲಿಯೇ ಚಿಕ್ಕ ಮಗನೊಂದಿಗೆ ವಾಸಿಸತೊಡಗಿದಳು. ಬಡತನದ ಸಮಸ್ಯೆ ಇನ್ನೂ ಹೆಚ್ಚಾಯಿತು.

Advertisement

ಒಳ್ಳೆಯ ಮನಸ್ಸಿನವಳಾಗಿದ್ದ ಲಕ್ಷ್ಮಮ್ಮನ ಅಪಾರವಾದ ಕಷ್ಟವನ್ನು ಕಂಡು ದೇವರು ಯಾವುದೋ ಒಂದು ರೂಪದಲ್ಲಿ ಬಂದು ನಿನಗೆ ನನ್ನಿಂದ ಯಾವ ವರಬೇಕು ಎಂದು ಕೇಳಿದರು. ತುಂಬಾ ಬಡತನದಲ್ಲಿ ಲಕ್ಷ್ಮಮ್ಮ ಹಣ, ಐಶ್ವರ್ಯ, ಬೃಹತ್ತಾದ ಬಂಗಲೆ ಏನು ಬೇಕಾದರೂ ಕೇಳಬಹುದಿತ್ತು. ಆದರೆ ಅವನ್ನೆಲ್ಲ ಬಿಟ್ಟು ತನ್ನ ಪ್ರೀತಿಯ ಗಂಡನನ್ನು ಬದುಕಿಸಿಕೊಡುವಂತೆ ಬೇಡಿಕೊಂಡಳು. ಆಗ ದೇವರು ಆಕೆಯ ಗಂಡನನ್ನು ಬದುಕಿಸಿದರು. ಇದರಿಂದ ಲಕ್ಷ್ಮಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೊದಲಿನಂತೆಯೇ ಅವರ ಸಂಸಾರ ಖುಷಿಯಿಂದ ಸಾಗತೊಡಗಿತು.

ಕೆಲವರಿಗೆ ಹಣ, ಐಶ್ವರ್ಯವೇ ಮುಖ್ಯವಾಗುತ್ತದೆ. ಅದರ ಮುಂದೆ ಪ್ರೀತಿ, ವಿಶ್ವಾಸ ಎಂಬುದು ಲೆಕ್ಕಕ್ಕೇ ಇರುವುದಿಲ್ಲ.ಬೆಟ್ಟದಷ್ಟು ಹಣ ಇದ್ದರೂ ಸಹ ಪ್ರೀತಿ ಇಲ್ಲದಿದ್ದರೆ ಅವೆಲ್ಲ ವ್ಯರ್ಥ. ಈ ಮೇಲಿನ ಕಥೆಯು ಕಲ್ಪನೆಯಾಗಿದ್ದರೂ ಇದರಿಂದ ನಮ್ಮ ಜೀವನಕ್ಕೆ ಉಪಯುಕ್ತ ವಾಗುವಂತಹ ಉತ್ತಮ ಸಂದೇಶವಿದೆ. ಸಂಪತ್ತಿಗಿಂತ ಹೆಚ್ಚು ಮೌಲ್ಯವನ್ನು ನಾವು ನಮ್ಮನ್ನು ಪ್ರೀತಿಸುವವರಿಗೆ ನೀಡಬೇಕು. ಈ ರೀತಿ ಬಾಳಿದರೆ ಅದೇ ಸ್ವರ್ಗ.


ಸಂಗೀತಾ ಶ್ರೀ ಕೆ. ತುಮಕೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next