Advertisement
ತಾಲೂಕಿನ ಸುತ್ತೂರಿನ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರರ 6 ದಿನಗಳ ಕಾಲದ ಜಾತ್ರಾ ಮಹೋತ್ಸವಕ್ಕೆ ಸುತ್ತೂರಿನಲ್ಲಿ ಚಾಲನೆ ನೀಡಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಶಿಸಿಹೋಗುತ್ತಿವೆ, ಅವುಗಳ ಸ್ಥಾನದಲ್ಲಿ ಇಸ್ಪೀಟು, ಜೂಜಾಟಗಳು ಜಾಸ್ತಿಯಾಗಿವೆ ಎಂದ ಅವರು ಕರಾವಳಿಯ ಕಂಬಳದಂತಹ ಕ್ರೀಡೆಗಳನ್ನು ಉಳಿಸಲು ಸದ್ಯದಲ್ಲಿಯೇ ಕಾನೂನು ಜಾರಿಯಾಗಲಿದೆ ಎಂದರು.
Related Articles
Advertisement
ಕೃಷಿಕರ ಪರ ಸರ್ಕಾರ ಅನ್ನದಾತನ ಬೆಳೆಗೆ ನ್ಯಾಯಯುತವಾದ ಬೆಲೆ ಇಲ್ಲ. ಇದರಿಂದ ಕೃಷಿ ಕ್ಷೇತ್ರದಲ್ಲಿನ ಕೃಷಿಕ ಕಾಣುವಂತಾಗಿದೆ. ಅದಕ್ಕಾಗಿ ರಾಷ್ಟ್ರದಲ್ಲಿಯೇ ಇ-ಮಾರ್ಕೆಟಿಂಗ್ ತಂದ ಪ್ರಥಮ ಸರ್ಕಾರ ತಮ್ಮದಾಗಿದೆ. ಕೃಷಿ ಪ್ರಯೋಗಾಲಯದ ಲಾಭ (ಆವಿಷ್ಕಾರ) ಭೂಮಿಯನ್ನು ತಲುಪುತ್ತಿಲ್ಲ, ಪ್ರಯೋಗಾಲಯ ಮತ್ತು ಕೃಷಿಕನ ಅಂತರ ಕಡಿಮೆ ಯಾಗದ ಹೊರತು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಅಸಾಧ್ಯ ಎಂದು ಸಿದ್ದರಾಮಯ್ಯ ನುಡಿದರು.
ತಿರುಚಿದ ಧರ್ಮ: ಧರ್ಮ ಎಂದರೆ ಮಾನವೀಯ ಮೌಲ್ಯದಿಂದ ಕೂಡಿದ ಜೀವನ ಪದ್ಧತಿ. ಮಂತ್ರಿಗಳು ಆದರೆ ನಮ್ಮಲ್ಲಿಂದು ಇದನ್ನು ತಿರುಚಲಾಗಿದೆ. ಇದರಿಂದಾಗಿ ನಮ್ಮ ಸಮಾಜ ಚಲನಾಶೀಲತೆಯನ್ನು ಕಳೆದುಕೊಂಡು ಜಡ್ಡುಗಟ್ಟಿ ಕುಳಿತಿದೆ. ಇದು ಸರಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಕಂಡುಕೊಂಡವರು ಬಸವಣ್ಣ.
ಆದರೆ ಇಂದು, ಬಸವಣ್ಣ, ಅಂಬೇಡ್ಕರ್ ಅವರ ತತ್ವಗಳು ಆಚರಣೆಯಾಗುತ್ತಿಲ್ಲ. ಶ್ರೀಮಠ ಅನ್ನದಾಸೋಹ, ಜ್ಞಾನದಾಸೋಹ ಕ್ರಿಯಾಶೀಲತೆಯನ್ನು ಬೆಳೆಗಿಸಲು ಶ್ರಮವಹಿಸುತ್ತಿದೆ. ಇಂತಹ ಜಾತ್ರೋತ್ಸವಗಳನ್ನು ಏರ್ಪಡಿಸಿ ಜನರಲ್ಲಿ ಸಮಗ್ರ ಬದಲಾವಣೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಶ್ರೀಮಠವನ್ನು ಶ್ಲಾಸಿದರು.
ಹಿಂದೆಲ್ಲಾ ಈ ಜಾತ್ರಾ ಸಮಾರಂಭದಲ್ಲಿ ತಮ್ಮೊಂದಿಗೆ ಇಲ್ಲಿ ಆಸೀನರಾಗುತ್ತಿದ್ದ ಮಿತ್ರ ಮಹದೇವಪ್ರಸಾದ್ ಇಂದು ನಮ್ಮೊಡನಿಲ್ಲ. ಅವರ ಅಕಾಲಿಕ ಮರಣ ತಮ್ಮ ಪಾಲಿಗೆ ವೈಯಕ್ತಿಕ ಹಾಗೂ ರಾಜಕೀಯವಾಗಿ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಮಹದೇವಪ್ರಸಾದ್‌ರನ್ನು ನೆನಪಿಸಿಕೊಂಡರು.
ದುಗ್ಗಹಟ್ಟಿ ವೀರಭದ್ರಪ್ಪ ಪ್ರತಿಷ್ಠಾನದ ಕೃಷಿಕ ಪುಂಗವ ಪ್ರಶಸ್ತಿಯನ್ನು ಆರು ರೈತರಿಗೆ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ್ ವಿತರಿಸಿ ಮಾತನಾಡಿ, ಭೀಕರ ಬರಗಾಲದ ಸಮಯದಲ್ಲಿ ಜಾತ್ರೆ ಆಯೋಜನೆಗೊಂಡಿದೆ. ಬರಗಾಲದಲ್ಲೂ ಕನಿಷ್ಠ ನೀರಿನಲ್ಲಿ ಗರಿಷ್ಠ ಬೆಳೆ ತೆಗೆಯುವ ಕೃಷಿ ಮೇಳದ ಪ್ರಾತ್ಯಕ್ಷಿಕೆ ಬರಗಾಲಕ್ಕೆ ಪರಿಹಾರವಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಹಿಮಾ ಸುತ್ತಾನ್ ರಂಗೋಲಿ, ಸೋಬಾನೆ ಪದವನ್ನು ಉದ್ಘಾಟಿಸಿದರು. ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಗೋವಾದ ತಪೋಭೂಮಿಯ ಗುರುಪೀಠದ ಅಧ್ಯಕ್ಷ ಶ್ರೀ ಬ್ರಮೇಶಾನಂದಚಾರ್ಯರು ಆಶೀರ್ವಚನ ನೀಡಿದರು. ಲೊಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ಸೋಮಶೇಖರ್, ಧರ್ಮಸೇನಾ, ಮಾಜಿ ಶಾಸಕ ಸತ್ಯನಾರಾಯಣ ಮೈಸೂರು ನಗರಾಭಿವೃದ್ಧಿ ಅಧ್ಯಕ್ಷ ಧೃವ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣಸಿದ್ದಯ್ಯ, ಡಾ.ಯತೀಂದ್ರ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು. ಪ್ರೊ.ಸುಬ್ಬಪ್ಪ ಸ್ವಾಗತಿಸಿದರೆ, ಡಿ.ನಿರಂಜನಮೂರ್ತಿ ನಿರೂಪಿಸಿ, ಸೋಮಶೇಖರ್ ವಂದಿಸಿದರು. “ಬಂಡಾಯದ ಕಹಳೆ ಮತ್ತೆ ಮೊಳಗಲಿ’
ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿದ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಧರ್ಮದ ಬಗ್ಗೆ ನಮ್ಮಲ್ಲಿ ಮಾತು ಹೆಚ್ಚು ಅಚರಣೆಯಲ್ಲಿ ಕಡಿಮೆ. ಬಸವಣ್ಣ ಅಚರಣೆಗೆ ತಂದ ಸಾಮಾಜಿಕ ಬದಲಾವಣೆ ನಿಂತ ನೀರಾಗಿದೆ. ಅವರ ವಚನಗಳು ವಾಚನಕ್ಕೆ ಸೀಮಿತವಾಗಿದೆ. ಹಾಗಾಗಿಯೇ ಇಂದಿಗೂ ಮಹಿಳೆ ಪೂಜಾ ಸ್ವಾತಂತ್ರದಿಂದ ವಂಚಿತಳಾಗಿದ್ದಾಳೆ ಎಂದು ಅವರು ಅಭಿಪ್ರಾಯಪಟ್ಟರು. ಬಸವಣ್ಣನ ಅನುಭವ ಮಂಟಪದ ಅನುಭವಾಮೃತಗಳು ಕಾನೂನಾಗಿ ಮೂಡಿಬಂದರೆ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಈ ಬದಲಾವಣೆ ರಾಜಕಾರಣಿಗಳಿಂದ ಅಸಾಧ್ಯ. ಇದನ್ನು ಕಾನೂನಾಗಿ ರೂಪಿಸಲು ಪ್ರಯತ್ನಿಸಿದ ತಾನು ಸಮಾಜಕ್ಕೆ ಅಂಜಿ ಹಿಂದೆ ಸರಿಯುವಂತಾಗಿದೆ ಎಂದು ವಿಷಾದಿಸಿದರು. ಬಸವಣ್ಣನವರ ಬಂಡಾಯದ ಕಹಳೆ ಎಲ್ಲೆಡೆ ಮೊಳಗಿಸಲು ಸಿದ್ಧಗಂಗೆ ಹಾಗೂ ಸುತ್ತೂರಿನಂತಹ ಮಠಾಧಿಪತಿಗಳು ಸಿದ್ಧರಾಗಬೇಕೆಂದು ಅವರು ಮನವಿ ಮಾಡಿದರು.