Advertisement
ಹೌದು, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಸ್ಯಾಟ್ ಲೈಟ್ ರಿಂಗ್ ರಸ್ತೆ 144 ಕಿಮೀ ನಿರ್ಮಾಣಕ್ಕೆ 4750 ಕೋಟಿ ರೂ.ಅಂದಾಜು ವೆಚ್ಚದಲ್ಲಿ 5 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದಿದೆ. ಇದರಲ್ಲಿ ಮೂರು ಪ್ಯಾಕೇಜ್‌ಗಳು ರಾಮನಗರ ಜಿಲ್ಲೆಯಲ್ಲಿ ಹಾಯ್ದು ಹೋಗಲಿದ್ದು, ಮಾಗಡಿಯಿಂದ ರಾಮನಗರ ಮೂಲಕ ಕನಕಪುರ ತಾಲೂಕಿನವರೆಗೆ ಸುಮಾರು 70 ಕಿಮೀ ದೂರ ರಾಮನಗರ ಜಿಲ್ಲೆಯಲ್ಲಿ ಎಸ್‌ಟಿಆರ್‌ಆರ್ ರಸ್ತೆ ಎನ್ ಎಚ್ 948 ಎ ಹಾಯ್ದು ಹೋಗಲಿದೆ.
Related Articles
Advertisement
20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ: ಬೆಂಗಳೂರು ನಗರದ ಸುತ್ತಾ 11 ನಗರಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಎಸ್‌ಟಿಆರ್‌ಆರ್ ಯೋಜನೆಗೆ ಸಂಬಂಧಿ ಸಿದಂತೆ ಮೊದಲು ಪ್ರಸ್ತಾಪವಾಗಿದ್ದು 2005ರಲ್ಲಿ. ಈ ಯೋಜನೆಗೆ ರೂಪಿಸಲಾಗಿತ್ತಾದರೂ 2017ರ ವರೆಗೆ ಇದು ಕೇವಲ ಪ್ರಸ್ತಾವನೆಯಾಗೇ ಉಳಿದಿತ್ತು. 2017ರಲ್ಲಿ ಭಾರತ್ ಮಾಲಠಾ ಯೋಜನೆಯಡಿ ಮತ್ತೆ ಈ ರಸ್ತೆಯ ನಿರ್ಮಾಣಕ್ಕೆ ಜೀವ ಬಂದಿತು. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ಎಸ್‌ಟಿಆರ್ ಆರ್ ರಸ್ತೆಗೆ ಚಾಲನೆ ನೀಡಿ ದರು. 2024ರ ಮಾರ್ಚ್ ನಲ್ಲಿ 80 ಕಿಮೀ ದೂರದ ದಾಬಸ್ ಪೇಟೆ-ದೊಡ್ಡಬಳ್ಳಾಪುರ ರಿಂಗ್ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಸೆ.5ರಂದು 144 ಕಿಮೀ ಕಾಮಗಾರಿಗೆ ಎನ್‌ಎಚ್‌ಎಐ ಟೆಂಡರ್ ಕರೆದಿದೆ.
2 ರಾಷ್ಟ್ರೀಯ ಹೆದ್ದಾರಿಗಳ ಜೋಡಣೆ: ಬೆಂಗಳೂರು ಸ್ಯಾಟಲೈಟ್ ಸಿಟಿ ಔಟರ್ ರಿಂಗ್ ರೋಡ್ ಯೋಜನೆಗೆ ಎರಡು ಹಾಲಿ ರಾಷ್ಟ್ರೀಯ ಹೆದ್ದಾರಿ ಯನ್ನು ಜೋಡಣೆ ಮಾಡಲು ಎನ್‌ಎಚ್ ಎಐ ಮುಂದಾಗಿದೆ. ಬೆಂಗಳೂರು ಸುತ್ತಾ ನಿರ್ಮಾಣ ಮಾಡಿರುವ ದಾಬಸ್‌ಪೇಟೆಯಿಂದ ಹೊಸೂರು ವರೆಗೆ ಎನ್‌ಎಚ್ 207 ಹೊಸದಾಗಿ ಎನ್‌ಎಚ್ 648 ಆಗಿಬದಲಾಗಿದೆ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಿದ್ದು, ಇದರೊಂದಿಗೆ ಈ ರಸ್ತೆಗೆ ದಾಬಸ್‌ಪೇಟೆಯಿಂದ ಮಾಗಡಿ, ಕನಕಪುರ ಮೂಲಕ ಆನೇಕಲ್ ಹಾಯ್ದು ಹೊಸೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 948ಎ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದೆ.( ಹಿಂದೆ ಎನ್‌ಎಚ್205 ಬೆಂಗಳೂರು-ದಿಂಡಿಗಲ್ ರಸ್ತೆಯನ್ನು ಎನ್ ಎಚ್948 ಆಗಿ ಬದ ಲಾಯಿಸಲಾಗಿದೆ.) ಈ ಎರಡೂ ರಸ್ತೆಗಳು ಬೆಂಗಳೂರು ಸುತ್ತಾ ಹಾಯ್ದು ಹೋಗುವ ಎಸ್‌ಟಿಆರ್‌ಆರ್ ರಸ್ತೆಯಲ್ಲಿ ಸೇರ್ಪಡೆಯಾಗಿದೆ. ಎಸ್‌ಟಿಆರ್‌ಆರ್ ರಸ್ತೆಯ ಒಟ್ಟು ಉದ್ದ 288 ಕಿಮೀ ಇದ್ದು ನಮ್ಮ ರಾಜ್ಯದಲ್ಲಿ 243 ಕಿಮೀ, ತಮಿಳುನಾಡಿನಲ್ಲಿ 45 ಕಿಮೀ ಉದ್ದ ಈ ರಸ್ತೆ ಇರಲಿದೆ. ಪ್ರಸ್ತುತ ರಸ್ತೆ ಕಾಮಗಾರಿ ನಮ್ಮ ರಾಜ್ಯದಲ್ಲಿ 80 ಕಿಮೀ (ದಾಬಸ್‌ಪೇಟೆ-ಹೊಸಕೋಟೆ) ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸಂಚಾರ ಮುಕ್ತಗೊಂಡಿದೆ. ಇದೀಗ ಕೈಗೊಂಡಿರುವ 144 ಕಿಮೀ ಕಾಮಗಾರಿ ಪೂರ್ಣಗೊಂಡರೆ ಶೇ.95 ರಷ್ಟು ಎಸ್‌ಟಿಆರ್‌ಆರ್ ಕಾಮಗಾರಿ ನಮ್ಮ ರಾಜ್ಯದಲ್ಲಿ ಪೂರ್ಣವಾಗಲಿದೆ.
ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಎಸ್‌ಟಿಆರ್‌ಆರ್ ಕಾಮಗಾರಿಗೆ ಚಾಲನೆ ನೀಡುವ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂಡಿ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಅವರು 45 ದಿನಗಳ ಒಳಗೆ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದ್ದರು. ಇದೀಗ 30 ದಿನಗಳಲ್ಲಿ ಕಾಮಗಾರಿಗೆ ಟೆಂಡರ್ ಕರೆದಿದ್ದಾರೆ. ಇದರಿಂದಾಗಿ ಬೆಂಗಳೂರು ನಗರದ ಮೇಲಿನ ಸಂಚಾರ ದಟ್ಟಣೆ ಕಡಿಮೆಯಾಗುವ ಜೊತೆಗೆ ಸುತ್ತಲಿನ 11 ನಗರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯೋಜನೆಗೆ ಅನುಮೋದನೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತೀನ್‌ಗಡ್ಕರಿ ಅವರಿಗೆ ನಮ್ಮ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. -ಡಾ.ಸಿ.ಎನ್.ಮಂಜುನಾಥ್, ಸಂಸದ
-ಸು.ನಾ.ನಂದಕುಮಾರ್