ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಅನುಷ್ಠಾನಗೊಂಡ ದಿನದಿಂದ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಜಿಲ್ಲಾದ್ಯಂತ ಬರೋಬ್ಬರಿ 6 ಕೋಟಿಗೂ ಅಧಿಕ ಮೌಲ್ಯದ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಗದು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ 5 ಕ್ಷೇತ್ರಗಳಲ್ಲಿ 57 ಲಕ್ಷ ರೂ., ನಗದು ವಶಕ್ಕೆ ಪಡೆಯಲಾಗಿದ್ದು ಆ ಪೈಕಿ ಗೌರಿಬಿದನೂರಲ್ಲಿ 90.9500ರೂ, ಬಾಗೇಪಲ್ಲಿ ಕ್ಷೇತ್ರದಲ್ಲಿ 8.32,000 ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1,225,850 ರೂ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಒಟ್ಟು 290.900 ಲಕ್ಷ ರೂ, ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ 1,89.900 ಲಕ್ಷ ರೂ, ನಗದು ವಶಕ್ಕೆ ಪಡೆಯಲಾಗಿದೆ. ಜಿಲ್ಲಾದ್ಯಂತ ಒಟ್ಟು 86,816.14 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದು ಅದರ ಒಟ್ಟಾರೆ ಮೌಲ್ಯ 2,45 ಲಕ್ಷ ರೂ ಗಳಾಗಿವೆ.
ಗೌರಿಬಿದನೂರಲ್ಲಿ 676.73 ಲೀಟರ್, ಬಾಗೇಪಲ್ಲಿ ಕ್ಷೇತ್ರದಲ್ಲಿ 999.02 ಲೀಟರ್, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 8,2371, 96 ಲೀಟರ್, ಶಿಡ್ಲಘಟ್ಟದಲ್ಲಿ 898.9 ಲೀಟರ್ ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ 1968.35 ಲೀಟರ್ ಅಕ್ರಮ ಮದ್ಯವನ್ನು ಅಬಕಾರಿ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಇನ್ನೂ ಮಾದಕ ವಸ್ತು ವಶಕ್ಕೆ ಪಡೆದಿರುವ ಪೊಲೀಸರು ಚುನಾವಣೆ ವೇಳೆ ಒಟ್ಟು 8.32 ಕೆ.ಜಿ.ಯ ಒಟ್ಟು 5.19 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದರೆ ಒಟ್ಟು 5.64 ಕೆ.ಜಿ. ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 2.67 ಕೋಟಿ ಮೌಲ್ಯದಾಗಿದೆ. ಇನ್ನೂ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಬೆಲೆ ಬಾಳುವ ವಸ್ತುಗಳನ್ನು (ಪ್ಯಾನ್ಸ್, ಸೀರೆ, ಕುಕ್ಕರ್, ಮಿಕ್ಸಿ ಮತ್ತಿತರ ವಸ್ತುಗಳು) ಜಿಲ್ಲಾದ್ಯಂತ ಬರೋಬ್ಬರಿ 3.80 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.