Advertisement
ಅನೇಕ ಕಡೆ ಕೆರೆಗಳು ಮುಚ್ಚಿಹೋಗಿದ್ದು, ಆ ಪ್ರದೇಶದಲ್ಲಿ ಕೆಸರು ತುಂಬಿ ಕಳೆ ಬೆಳೆದಿದ್ದು, ಜಾಗ ಗುರುತಿಸಲಾಗದಷ್ಟು ಮೂಲ ಸ್ವರೂಪಕ್ಕೆ ಧಕ್ಕೆಯಾಗಿದೆ. 1904ರ ಸರಕಾರದ ಅಡಂಗಲ ಪ್ರಕಾರ ಕೋಟೇಶ್ವರದ ಕುಂಬ್ರಿಯಿಂದ ಕೊಮೆ ತನಕ 50ಕ್ಕೂ ಮಿಕ್ಕಿ ಕೆರೆ ಹಾಗೂ ಗುಮ್ಮಿಗಳಿದ್ದವು. ಆ ಕಾಲಘಟ್ಟದಲ್ಲಿ ಅಲ್ಲಿನ ಕೃಷಿಕರಿಗೆ ಬೆಳೆ ಬೆಳೆಯಲು ಆಧಾರವಾಗಿತ್ತು. ಅವುಗಳ ನಿರ್ವಹಣೆಯನ್ನು ಕೃಷಿಕರೇ ಮಾಡುತ್ತಿದ್ದರು. ಕ್ರಮೇಣ ಹೂಳೆತ್ತದೇ ನಿರ್ವಹಣೆ ಇಲ್ಲದೆ ನಾಶವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವೊಂದು ಕೆರೆಗಳ ಹೂಳೆತ್ತಲಾಗಿದ್ದು, ಮಿಕ್ಕುಳಿದ ಕೆರೆಗಳ ಹೂಳೆತ್ತಲು ಸಂಪನ್ಮೂಲದ ಕೊರತೆಯಿಂದಾಗಿ ಅವುಗಳು ಕಡತದಲ್ಲಿ ಮಾತ್ರ ಉಳಿದಿವೆ. 50ರಷ್ಟು ಕೆರೆಗಳಿದ್ದು, ಅವೆಲ್ಲವೂ ಗುರುತಿಸಲ್ಪಟ್ಟಿದ್ದರೂ, ಹೂಳೆತ್ತುವ ಭಾಗ್ಯ ಕಾಣದೆ ಸ್ಥಳ ಗುರುತಿಸುವಿಕೆ ಪ್ರಶ್ನಾರ್ಥಕವಾಗಿ ಉಳಿದಿದೆ.
Related Articles
ರಾ.ಹೆದ್ದಾರಿಯ ಸನಿಹದಲ್ಲೇ ಇರುವ ಸುಮಾರು 60 ಸೆಂಟ್ಸ್ ಜಾಗವ್ಯಾಪ್ತಿ ಹೊಂದಿರುವ ಗಂಗನಕೆರೆ 20 ವರ್ಷಗಳಿಂದ ಹೂಳೆತ್ತದೇ ತಡೆಬೇಲಿ ನಿರ್ಮಿ ಸದೇ ಅಪಾಯಕಾರಿ ಸ್ಥಿತಿಯಲ್ಲಿದೆ. ತೆಂಗಿನಬೆಟ್ಟು ತನಕ ದಾರಿ ಸಾಗುವ ಈ ಮಾರ್ಗದ ಅಂಚಿನಲ್ಲಿ 30 ಮನೆಗಳಿದ್ದೂ, 250ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಗೋಪಾಡಿ ಯುವಕಮಂಡಲ ಹಲವಾರು ವರ್ಷ ಗಳ ಹಿಂದೆ ಹೂಳೆತ್ತಿದ್ದರೂ, ಅದನ್ನು ಮುಂದುವರಿಸುವಲ್ಲಿ ಇಲಾಖೆ ಕ್ರಮಕೈ
ಗೊಂಡಿಲ್ಲ. ಈ ಕೆರೆಯನ್ನು ಸದುಪಯೋಗಗೊಳಿಸಿದಲ್ಲಿ ಅಂತರ್ಜಲ ವೃದ್ಧಿಯಾಗಿ ಜಲಕ್ಷಾಮಕ್ಕೆ ಪರಿಹಾರ ಲಭಿಸೀತು.
Advertisement
ಹೂಳೆತ್ತಲಾಗಿದೆಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ಸಂಪನ್ಮೂಲಕ್ಕನುಗುಣವಾಗಿ ಕೆಲವು ಕೆರೆಗಳ ಹೂಳೆತ್ತಲಾಗಿದೆ. ಇಲಾಖೆ ಹೆಚ್ಚಿನ ಅನುದಾನ ಒದಗಿಸಿದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಗಣೇಶ,
ಗೋಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನುಕೂಲ
ರಾ.ಹೆದ್ದಾರಿ ಸನಿಹದ ಗಂಗನಕೆರೆ ಹೂಳೆತ್ತುವಲ್ಲಿ ಗೋಪಾಡಿ ಯುವಕ ಮಂಡಲ ಕ್ರಮಕೈಗೊಂಡಿದ್ದು, ಸರಕಾರ ಅನುದಾನ ಬಿಡುಗಡೆಗೊಳಿಸಿದಲ್ಲಿ ಕೆರೆಗಳ ಹೂಳೆತ್ತಲುಅನುಕೂ
ಲವಾದೀತು.
-ಗಿರೀಶ್ ಉಪಾಧ್ಯ, ಗ್ರಾ.ಪಂ. ಸದಸ್ಯರು, ಗೋಪಾಡಿ – ಡಾ| ಸುಧಾಕರ ನಂಬಿಯಾರ್