Advertisement

ಕವಿಗೋಷ್ಠಿಯಲ್ಲಿ 32ಕ್ಕೂ ಹೆಚ್ಚು ಕವಿಗಳು ಭಾಗಿ

03:20 PM Nov 25, 2018 | Team Udayavani |

ದಾವಣಗೆರೆ: 63ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ರೋಟರಿ ಬಾಲಭವನದಲ್ಲಿ ಶನಿವಾರ ಮಹಾನಗರಪಾಲಿಕೆ, ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಮೇಯರ್‌ ಶೋಭಾ ಪಲ್ಲಾಗಟ್ಟೆ ಉದ್ಘಾಟಿಸಿದರು.

Advertisement

ಕವಿಗಳಾದ ಶಿವಯೋಗಿ ಹಿರೇಮಠ್…, ಕೆ.ಎನ್‌. ಸ್ವಾಮಿ, ಓಂಕಾರಯ್ಯ ತವನಧಿ, ಮಹಾಂತೇಶ್‌ ನಿಟ್ಟೂರು, ಎಂ. ಬಸವರಾಜ್‌, ಜೆ. ವಸುಪಾಲಪ್ಪ, ಪರಮೇಶ್ವರಪ್ಪ, ಅಣಬೇರು ತಾರೇಶ್‌, ಡಿ. ಫ್ರಾನ್ಸಿಸ್‌, ನೀಲಗುಂದದ ಜಯಮ್ಮ, ವೀಣಾ ಕೃಷ್ಣಮೂರ್ತಿ, ಓಂಕಾರಮ್ಮ ರುದ್ರಮುನಿಸ್ವಾಮಿ, ಸುಕನ್ಯಾ ತ್ಯಾವಣಿಗಿ, ಸಂಧ್ಯಾ ಸುರೇಶ್‌ ಸೇರಿದಂತೆ 32ಕ್ಕೂ ಹೆಚ್ಚು ಹಿರಿಯ, ಕಿರಿಯ ಕವಿಗಳು ಕವನವಾಚನ ಮಾಡಿದರು. ಸ್ಮರಣಿಕೆ, ಗೌರವಧನ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್‌, ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ರಾಜಶೇಖರ್‌ ಗುಂಡಗಟ್ಟಿ, ಸಾಹಿತಿ ಕೆ.ಎಸ್‌. ವೀರಭದ್ರಪ್ಪ ತೆಲಗಿ, ನಗರಪಾಲಿಕೆ ಅಭಿಯಂತರ ಉದಯ್‌ ಕುಮಾರ್‌ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಂಗಾಧರ್‌ ಬಿ.ಎಲ್‌. ನಿಟ್ಟೂರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next