Advertisement

ಅಮೆರಿಕ ಬೇಸಗೆ ಶಿಬಿರದಲ್ಲಿ ಭಾಗಿಯಾದ 200ಕ್ಕೂ ಹೆಚ್ಚು ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆ

02:42 PM Aug 02, 2020 | sudhir |

ನ್ಯೂಯಾರ್ಕ್‌: ಕೋವಿಡ್‌ ಸೋಂಕು ಹರಡುವಿಕೆಯನ್ನು ಲಘುವಾಗಿ ಪರಿಗಣಿಸಿದ್ದರಿಂದಲೋ ಏನೋ.. ಅಮೆರಿಕ ಜಾರ್ಜಿಯಾದಲ್ಲಿ ನಡೆಸಲಾದ ಹಲವು ಬೇಸಗೆ ಶಿಬಿರಗಳಲ್ಲಿ ಭಾಗಿಯಾದ ಚಿಣ್ಣರಲ್ಲೂ ಸೋಂಕು ಕಾಣಿಸಿಕೊಂಡಿದೆ.
ವಿವಿಧೆಡೆ ಶಿಬಿರಗಳಲ್ಲಿ ಪಾಲ್ಗೊಂಡ 597 ಮಂದಿ ಮಕ್ಕಳಲ್ಲಿ 260 ಮಂದಿಯಲ್ಲಿ ಸೋಂಕು ಕಾಣಿಸಿದೆ.

Advertisement

ಬೇಸಗೆ ಶಿಬಿರಗಳ ಆಯೋಜಕರು ಅಮೆರಿಕದ ಕೇಂದ್ರೀಯ ರೋಗ ನಿಯಂತ್ರಣ ಮತ್ತು ತಡೆ ಸಂಸ್ಥೆಯ ಸೂಚನೆಗಳನ್ನು ಗಾಳಿಗೆ ತೂರಿ ಶಿಬಿರ ನಡೆಸಿದ್ದಾರೆ ಎನ್ನಲಾಗಿದೆ. ಮಕ್ಕಳಿಗೆ ಮಾಸ್ಕ್ ಇಲ್ಲದೆ ಸಿಬಂದಿಗೆ ಮಾತ್ರ ಮಾಸ್ಕ್ ಧರಿಸಲು ಹೇಳಲಾಗಿತ್ತು. ಅಲ್ಲದೇ ಅವರಿಗೆ ಮಾತ್ರ 12 ದಿನದೊಳಗಿನ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ತೋರಿಸಲ ಹೇಳಲಾಗಿತ್ತು. ಮಕ್ಕಳು ವಾಸವಿದ್ದ ಕ್ಯಾಬಿನ್‌ಗಳಲ್ಲಿ 26 ಮಂದಿಯವರೆಗೆ ಇದ್ದರು. ಶಿಬಿರದಲ್ಲಿ ಕೋವಿಡ್‌ ಸುರಕ್ಷತೆಗೆ ಅಷ್ಟೊಂದು ಮಹತ್ವ ಕೊಟ್ಟಿರಲಿಲ್ಲ. ಕೆಲವರಿಗೆ ಅಲ್ಪ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೆಲವರನ್ನು ಮನೆಗೆ ಕಳುಹಿಸಲಾಗಿತ್ತು.

ಜೂ.25ರಂದು ತಪಾಸಣೆಗೆ ಒಳಪಡಿಸಲಾಗಿದ್ದು 260 ಮಂದಿ ಮಕ್ಕಳಲ್ಲಿ ಸೋಂಕು ತ್ತೆಯಾಗಿತ್ತು. ಇವರಲ್ಲಿ ಶೇ.74ರಷ್ಟು ಮಂದಿಗೆ ಅಲ್ಪ ರೋಗ ಲಕ್ಷಣವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next