Advertisement

200ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರು ತಾಲೂಕು ಮಟ್ಟದ ಹುದ್ದೆಗೆ ನಿಯುಕ್ತಿ : ಸಚಿವ ಚವ್ಹಾಣ್

06:26 PM Sep 22, 2020 | mahesh |

ಬೆಂಗಳೂರು: 200ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರುಗಳನ್ನು ತಾಲೂಕು ಮಟ್ಟದ ಆಡಳಿತ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ ಹಾಗೂ 80ಕ್ಕೂ ಹೆಚ್ಚು ಉಪನಿರ್ದೇಶಕರುಗಳಿಗೆ ಮುಂಬಡ್ತಿ ನೀಡಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

Advertisement

2002 ರಲ್ಲಿ ಇಲಾಖಾ ಪುನರ್ ರಚನೆ ಆಗಿದ್ದರು ಪೂರ್ಣ ಪ್ರಮಾಣಾದಲ್ಲಿ ಅನುಷ್ಟಾನ ಆಗಿರಲಿಲ್ಲ ಇದರಿಂದಾಗಿ ಉಪನಿರ್ದೇಶಕರ ಹುದ್ದೆಗಳು ಭರ್ತಿ ಆಗದೆ ಅನೇಕ ಹಿರಿಯ ಅಧಿಕಾರಿಗಳು ಮುಂಬಡ್ತಿಯಿಂದ ವಂಚಿತರಾಗಿದ್ದರು. ಶೇ 80 ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಪ್ರಭಾರಿ ಉಪನಿರ್ದೇಶಕರ ಉಸ್ತುವಾರಿಯಲ್ಲಿ ಕೆಲಸ ನಡೆಯುತ್ತಿತ್ತು.

ಇದರಿಂದಾಗಿ ಜೇಷ್ಠತೆಯ ಆಧಾರದಲ್ಲಿ ಬಡ್ತಿ ದೊರಕದೆ ಅನೇಕ ಹಿರಿಯ ಅಧಿಕಾರಿಗಳು ಮನನೊಂದು ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದರು ಇದು ಆಡತ ಯಂತ್ರ ಕುಸಿಯುವುದಕ್ಕು ಕಾರಣವಾಗಿತ್ತು. ಅಲ್ಲದೆ ಇಲಾಖೆಯ ಕಾರ್ಯ ಕುಂಠಿತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಇಲಾಖೆಯ ಕಾರ್ಯದರ್ಶಿ, ಆಯುಕ್ತರು, ಮತ್ತು ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ ಸುಧಿರ್ಘವಾಗಿ ಚರ್ಚೆ ನಡೆಸಿ ಎಲ್ಲ ಉಪನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದ್ದು ಇದರಿಂದ ಇಲಾಖೆಯಲ್ಲಿ ಆಡಳಿತವು ವ್ಯವಸ್ಥಿತವಾಗಿ ನಡೆಯುವಂತಾಗಿದೆ.

ಕಿರಿಯ ಅಧಿಕಾರಿಗಳೆಲ್ಲ ಹಿರಿಯ ಅಧಿಕಾರಿಗಳ ಹುದ್ದೆಯನ್ನು ಅಲಂಕರಿಸಿದ್ದರು. ಸಧ್ಯ ಇಲಾಖೆಯ ಪುನರ್ ರಚನೆ ಸಂಪೂರ್ಣಗೊಂಡಿದ್ದು ಜೇಷ್ಠತೆಯ ಆಧಾರದ ಮೇಲೆ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ತಾಲೂಕು ಮಟ್ಟದ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಪ್ರಕ್ರಿಯೆ ಪುರ್ಣಗೊಂಡಿದೆ.

ಇಲಾಖೆಯಲ್ಲಿ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರ ಹುದ್ದೆಗಳು ಕೂಡಾ ಕಳೆದ 3 ವರ್ಷದಿಂದ ಪ್ರಾಭಾರಿ ಅಧಿಕಾರಿಗಳು ಅಥವಾ ಜೇಷ್ಠತೆಯಲ್ಲಿ ಕಿರಿಯ ಅಧಿಕಾರಿಗಳಿಂದ ಕಾರ್ಯ ನಿರ್ವಹಣೆ ಆಗುತ್ತಿತ್ತು. ಇದರಿಂದ ಜೇಷ್ಠತೆಯಲ್ಲಿ ಹಿರಿಯರಾಗಿದ್ದ ವೈದ್ಯಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದ್ದನ್ನು ಮನಗಂಡು ಇಲಾಖೆ ಪುನರ್ ರಚನೆಯ ಮಾರ್ಗಸುಚಿಗಳ ಅನ್ವಯ ಜೇಷ್ಟತೆಯಲ್ಲಿ ಹಿರಿಯರಾಗಿರುವ ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ತಾಲೂಕು ಮಟ್ಟದ ಹುದ್ದೆಯಾದ ಸಹಾಯಕ ನಿರ್ದೇಶಕರ ಸ್ಥಾನಕ್ಕೆ ಸ್ಥಳ ನಿಯುಕ್ತಿಗೊಳಿ ಆದೇಶ ಹೊರಡಿಸಲಾಗುತ್ತಿದೆ ಇದರಿಂದಾಗಿ ಹಿರಿಯ ವೈದ್ಯಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಬಗ್ಗೆ ಇಲಾಖೆಯ ಅಧಿಕಾರಿಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next