Advertisement
ಅತಿ ಹೆಚ್ಚು ಸಾವುಈ ಹಿಂದೆ ರಾಜ್ಯದಲ್ಲಿ ಒಂದೇ ದಿನ 140 ಸೋಂಕಿತರ ಸಾವು ವರದಿಯಾಗಿತ್ತು. ಆದರೆ, ಮಂಗಳವಾರ 148 ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು 61, ಮೈಸೂರು 16, ಧಾರವಾಡ ಎಂಟು, ಕೊಪ್ಪಳ ಮತ್ತು ಬಳ್ಳಾರಿ ತಲಾ ಆರು ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಆರೋಗ್ಯ ಇಲಾಖೆ ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಪರೀಕ್ಷೆಗಳು ಹೆಚ್ಚಳವಾಗಿ, ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಮಾಡಿದರೆ ಮಾತ್ರ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಪರೀಕ್ಷೆ ಹೆಚ್ಚಳ
ಸೋಂಕು ಪರೀಕ್ಷೆ ಹೆಚ್ಚಳವಾದ ಹಿನ್ನೆಲೆ ಸೋಂಕು ಪ್ರಕರಣಗಳು ಹೆಚ್ಚಳವಾ ಗಿವೆ. ಕಳೆದ ಐದು ದಿನಗಳಿಂದ ರಾಜ್ಯದಲ್ಲಿ ಸೋಂಕು ಪರೀಕ್ಷೆಗಳು 40 ಸಾವಿರ ಆಸುಪಾಸಿನಲ್ಲಿದ್ದವು, ಅಂತೆಯೇ ಸೋಂಕು ಪ್ರಕರಣಗಳು ಕೂಡಾ ಆರು ಸಾವಿರದ ಆಸುಪಾಸಿನಲ್ಲಿದ್ದವು. ಆದರೆ, ಮಂಗಳವಾರ ಸೋಂಕು ಪರೀಕ್ಷೆಗಳು 59,787ಕ್ಕೆ ಹೆಚ್ಚಳವಾಗಿದ್ದು, ಪ್ರಕರಣಗಳು 8,161ಕ್ಕೆ ಏರಿಕೆಯಾಗಿವೆ.