Advertisement

ಸಂಭ್ರಮಾಚರಣೆ ವೇಳೆ 15 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಅಸ್ವಸ್ಥ

05:12 PM Jun 01, 2019 | Team Udayavani |

ಹಾವೇರಿ : ಜಿಲ್ಲೆಯ ಬ್ಯಾಡಗಿ ಪುರಸಭೆಯ ಚುನಾವಣಾ ಫ‌ಲಿತಾಂಶ ಪ್ರಕಟವಾದ ಬಳಿಕ ಬಣ್ಣದೋಕುಳಿ ಆಡಿ ಗೆಲುವಿನ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ 15 ಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.

Advertisement

15 ಮತ್ತು 16 ನೆ ವಾರ್ಡ್‌ನಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ಬಣ್ಣ ಹಾಕಲಾಗಿದ್ದು, ಕೆಮಿಕಲ್‌ ಮಿಶ್ರಿತ ಬಣ್ಣ ತಾಗಿ ಮಹಿಳೆಯರು ಸೇರಿ 15 ಕ್ಕೂ ಹೆಚ್ಚು ಜನರಿಗೆ ಅಲರ್ಜಿ ಮತ್ತು ತೀವ್ರವಾಗಿ ಮೈತುಕರಿಕೆ ಕಾಣಿಸಿಕೊಂಡಿದೆ.

ಕೂಡಲೆ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಸ್ಪತ್ರೆಗೆ ಶಾಸಕ ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next