Advertisement

100ಕ್ಕೂ ಹೆಚ್ಚು ಬಸ್‌ ಸಂಚಾರ

10:08 AM Jun 22, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದು, ಸೋಮವಾರ ಸಂಜೆವರೆಗೂ 50 ಮಾರ್ಗಗಳಲ್ಲಿ 100ಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಡೆಸಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ಟಿ. ವೀರೇಶ್‌ ತಿಳಿಸಿದರು.

Advertisement

ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು. ಹಿಂದಿನ ದರವನ್ನೇ ಪ್ರಯಾಣಿಕರಿಂದ ಪಡೆದುಕೊಳ್ಳ ಲಾಗುತ್ತಿದೆ. ಸೋಮವಾರ 1 ಗಂಟೆವರೆಗೂ 2,490 ಜನರು ಪ್ರಯಾಣ ಮಾಡಿದ್ದಾರೆ ಎಂದರು.

ಚಿಕ್ಕಮಗಳೂರು ನಗರದಿಂದ ಬೆಂಗಳೂರು, ಶಿವಮೊಗ್ಗ, ಶೃಂಗೇರಿ, ತರೀಕೆರೆ, ಆಲ್ದೂರು, ಹಾಸನ, ಬಾಣಾವರ, ಜಾವಗಲ್‌ ಮಾರ್ಗದಲ್ಲಿ ಬಸ್‌ ಸಂಚರಿಸಿವೆ. ಚಿಕ್ಕಮಗಳೂರು ವಿಭಾಗದಿಂದ ಅರಸೀಕೆರೆ, ಸಕಲೇಶಪುರ, ಬೇಲೂರು, ಕಡೂರು, ಮೂಡಿಗೆರೆ ಡಿಪೋಗಳನ್ನು ಒಳಗೊಂಡಿದ್ದು 500 ಮಾರ್ಗ, 540 ಬಸ್‌ ಗಳಿವೆ 2,283 ಮಂದಿ ಸಿಬ್ಬಂದಿಗಳಿದ್ದಾರೆ. ಶೇ.25 ರಷ್ಟು ಮಾರ್ಗಗಳಲ್ಲಿ ಬಸ್‌ ಸಂಚಾರ ನಡೆಸಿವೆ. ಲಾಕ್‌ಡೌನ್‌ ಬಳಿಕ ಚಿಕ್ಕಮಗಳೂರು ವಿಭಾಗದಲ್ಲಿ ಪ್ರತಿದಿನ 50 ಲಕ್ಷ ರೂ. ಆದಾಯ ಖೋತಾ ಉಂಟಾಗಿದೆ. ಏಪ್ರಿಲ್‌ ತಿಂಗಳಿನಿಂದ ಜೂ.20ವರೆಗೆ 46 ಕೋಟಿ ರೂ. ಖೋತಾ ಆಗಿದೆ ಎಂದು ತಿಳಿಸಿದ ಅವರು, ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ವಿಭಾಗದ 129 ಮಂದಿ ಸಿಬ್ಬಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದು, 5 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ವಿಭಾಗದಲ್ಲಿ 2,145 ಸಿಬ್ಬಂದಿಗಳಲ್ಲಿ 619 ಮಂದಿ ಚಾಲಕರಿದ್ದು, ಅದರಲ್ಲಿ 584 ಮಂದಿ ಲಸಿಕೆ ಪಡೆದುಕೊಂಡಿದ್ದರೆ, 117 ನಿರ್ವಾಹಕರಲ್ಲಿ 109 ಜನರು ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. 994 ಚಾಲಕರು ಮತ್ತು ನಿರ್ವಾಹಕರಲ್ಲಿ 946 ಜನರು, 262 ಮ್ಯಾಕಾನಿಕ್‌ಗಳಲ್ಲಿ 243 ಮಂದಿ, 291 ಆಡಳಿತಾತ್ಮಕ ಸಿಬ್ಬಂದಿಗಳಲ್ಲಿ 263 ಜನರು ಕೊರೊನಾ ಸೋಂಕು ತಡೆಗೆ ಲಸಿಕೆ ಹಾಕಿಸಿಕೊಂಡಿದ್ದು, ಶೇ.94ರಷ್ಟು ವ್ಯಾಕ್ಸಿನ್‌ ಪಡೆದಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next