Advertisement

Panamburu ಬರಲಿವೆ 10ಕ್ಕೂ ಅಧಿಕ ಪ್ರವಾಸಿ ಹಡಗು

11:11 PM Dec 04, 2023 | Team Udayavani |

ಪಣಂಬೂರು: ದೇಶದ ಬಂದರುಗಳಿಗೆ ಕ್ರೂಸ್‌ ಸೀಸನ್‌ ಪ್ರಾರಂಭವಾಗಲಿದ್ದು, ಡಿ. 8ರಂದು ನವಮಂಗಳೂರು ಬಂದರಿಗೆ ಸೆವೆನ್‌ ಸೀಸ್‌ ನ್ಯಾವಿಗೇಟರ್‌ ಐಷಾರಾಮಿ ಪ್ರವಾಸಿ ಹಡಗು ಬರಲಿದೆ.

Advertisement

ಕ್ರೂಸ್‌ ಪ್ರಯಾಣಿಕರಿಗೆ ಉತ್ತಮ ಸೇವಾ ಸೌಲಭ್ಯ ಸಿಗುವಂತಾಗಲು ಕ್ರೂಸ್‌ ಏಜಂಟ್‌ ಸಂಸ್ಥೆಗಳಿಗೆ ಕ್ರೂಸ್‌ ಪ್ರವಾಸೋದ್ಯಮ ಕುರಿತಂತೆ ಮಾಹಿತಿ ವಿಶೇಷ ಸಭೆ ಬಂದರಿನಲ್ಲಿ ಜರಗಿತು.

ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ಎ.ವಿ. ರಮಣ ಅವರು ಮಾತನಾಡಿ, 2023-24ರಲ್ಲಿ 10ಕ್ಕೂ ಆಧಿಕ ಪ್ರವಾಸಿ ಹಡಗುಗಳು ಬರಲಿದ್ದು, ಬೇಕಾದ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

ಬಂದರು ಪ್ರಾಧಿಕಾರದ ಉಪಾಧ್ಯಕ್ಷ ಕೆ.ಜಿ. ನಾಥ್‌, ಸಿಐಎಸ್‌ಎಫ್‌ ಆಧಿಕಾರಿ ರಾಜೇಂದ್ರ ಪಾಠಕ್‌, ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಉಪನಿರ್ದೆಶಕ ಎನ್‌. ಮಾಣಿಕ್ಯ, ಮೊಹಮ್ಮದ್‌ ಫಾರೂಕ್‌ ಹಾಗೂ ಪ್ರವಾಸೋದ್ಯಮ ನಿರ್ವಹಣೆಯ ಸಂಸ್ಥೆ, ಏಜಂಟರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next