ನವದೆಹಲಿ:ಒಂದು ವೇಳೆ ಪಾಕಿಸ್ತಾನ ತನ್ನ ಕಳ್ಳಾಟ ನಿಲ್ಲಿಸದಿದ್ದರೆ ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಕೊಲ್ಲುವ ದುಷ್ಕೃತ್ಯ ಮುಂದುವರಿಸಿದರೆ ಇನ್ನಷ್ಟು ಸರ್ಜಿಕಲ್ ದಾಳಿ ನಡೆಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ಅದಾನಿ ಗ್ರೂಪ್ ತೆಕ್ಕೆಗೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ನಾವು ಯಾವುದೇ ದಾಳಿಗಳನ್ನು ಸಹಿಸುವುದಿಲ್ಲ ಎಂಬುದನ್ನು ಸರ್ಜಿಕಲ್ ಸ್ಟ್ರೈಕ್ ಸಾಬೀತುಪಡಿಸಿದೆ. ನೀವು(ಪಾಕಿಸ್ತಾನ) ಒಂದು ವೇಳೆ ಹದ್ದುಮೀರಿದರೆ ನಾವು ಇನ್ನಷ್ಟು ಸರ್ಜಿಕಲ್ ದಾಳಿ ನಡೆಸುತ್ತೇವೆ ಎಂದು ಅಮಿತ್ ಶಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಅಮಿತ್ ಶಾ ಗೋವಾದ ಧಾರ್ ಬಂಡೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯ ಸಮಾರಂಭದಲ್ಲಿ ಮಾತನಾಡುತ್ತ ಈ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು ಈ ಸರ್ಜಿಕಲ್ ದಾಳಿ ನಡೆಸುವ ಪ್ರಮುಖ ನಿರ್ಧಾರ ಕೈಗೊಂಡಿದ್ದರು.
ಸರ್ಜಿಕಲ್ ದಾಳಿ ಮೂಲಕ ಗಡಿ ವಿಚಾರದಲ್ಲಿ ಭಾರತ ಯಾವುದೇ ದಾಳಿ ಅಥವಾ ಅತಿಕ್ರಮಣ ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. ಹೀಗಾಗಿ ಇನ್ನು ಮುಂದೆಯೂ ನಾವು ದಾಳಿಗೆ ಸಿದ್ಧ ಎಂದು ಶಾ ಹೇಳಿದರು.