Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಪಕ್ಷಾಂತರಿಗಳಿಗೆ ತಕ್ಕಶಾಸ್ತಿ ದೊರಕುವಂತಾಗಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಕುತಂತ್ರದಿಂದ ಅಧಿಕಾರ ಕಿತ್ತುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
Related Articles
Advertisement
ರಾಜಸ್ಥಾನದಲ್ಲಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣ: ರಾಜಸ್ತಾನದಲ್ಲಿನ ಟ್ರೈಲರ್ ಹತ್ಯೆ ಘಟನೆ ನಾವೆಲ್ಲರೂ ತೀವ್ರವಾಗಿ ಖಂಡಿಸಿದ್ದೇವೆ. ಯಾರೇ ತಪ್ಪು ಮಾಡಲಿ, ಯಾವ ಪಂಗಡದವನೆ ಆಗಿರಲಿ.. ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಲೆಬೇಕು. ಘಟನೆ ನಂತರ ಅಲ್ಲಿಯ ಸಿಎಂ ಆರೋಪಿಗಳನ್ನ ತಕ್ಷಣ ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಸಿಎಂ ಕೊಲೆಯಾದ ವ್ಯಕ್ತಿ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಹೀಗಾಗಿ ಅಲ್ಲಿನ ಸರಕಾರ ವಜಾ ಮಾಡುವ ಅವಶ್ಯಕತೆ ಇಲ್ಲ. ಹತ್ಯೆಗೆ ಸಂಬಂಧಿಸಿದ ಈಗಾಗಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳು ಪಾಕಿಸ್ಥಾನದ ಜೊತೆ ನಂಟಿದೆ ಎಂಬ ಬಿಜೆಪಿ ಆರೋಪದ ಮೂಲಕ ರಾಜಕೀಯ ಮಾಡಲು ಹೊರಟಿದೆ. ಉತ್ತರ ಪ್ರದೇಶದಲ್ಲಿ ಎಷ್ಟೋ ಘಟನೆಗಳು ನಡೆದಿವೆ. ಅಲ್ಲಿನ ಸರಕಾರ ವಜಾ ಮಾಡಲಾಗಿದೆಯೇ?. ಧರ್ಮದ ಹೆಸರಿನಲ್ಲಿನ ಸಂಘರ್ಷ ಬಿಟ್ಟು ಶಾಂತಿಯಿಂದ ಇರುವಂತೆ ಮಾತಾಡಿ ಎಂದು ಪ್ರಧಾನಿ ಮೋದಿಗೆ ಹೇಳಿದರೆ ಬಾಯಿನೇ ತೆರೆಯಂಗಿಲ್ಲ. ಕಾಂಗ್ರೆಸ್ ಬಗ್ಗೆ ವಿದೇಶದಲ್ಲಿ ಪ್ರಧಾನಿ ಮೋದಿ ಮಾತಾಡ್ತಾರೆ. ಅದೇ ಬೇರೆಯವರು ಮಾತಾಡಿದ್ರೆ ದೇಶಕ್ಕೆ ಅವಮಾನ ಆಯ್ತು ಅಂತಾರೆ. ಹೀಗಾದರೆ ಹೇಗೆ? ಎಂದು ಖರ್ಗೆ ಪ್ರಶ್ನಿಸಿದರು.
ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಉಪಸ್ಥಿತರಿದ್ದರು.