Advertisement

2ನೇ ತ್ತೈಮಾಸಿಕದಲ್ಲಿ ಉದ್ಯೋಗಕ್ಕೆ ಹೆಚ್ಚು ಭವಿಷ್ಯ

12:25 AM Jul 30, 2021 | Team Udayavani |

ಹೊಸದಿಲ್ಲಿ: ಸೋಂಕು ನಿಯಂತ್ರಣಕ್ಕಾಗಿ ಜಾರಿಯಾಗಿದ್ದ ಲಾಕ್‌ಡೌನ್‌ ವಾಪಸ್‌ ಪಡೆದ ಬಳಿಕ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಉದ್ಯೋಗ ಕ್ಷೇತ್ರವೂ ಚೇತೋಹಾರಿಯಾಗಿದೆ. ಹಾಲಿ ತಿಂಗಳಿಂದ ಸೆಪ್ಟಂಬರ್‌ವರೆಗೆ ಹೊಸತಾಗಿ ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.

Advertisement

ಹಾಲಿ ವಿತ್ತೀಯ ವರ್ಷದ 2ನೇ ತ್ತೈಮಾಸಿಕದಲ್ಲಿ  (ಜುಲೈ -ಸೆಪ್ಟಂಬರ್‌) ವಿವಿಧ ಕ್ಷೇತ್ರಗಳಲ್ಲಿನ ಪದವೀಧರ ರಿಗೆ ಹೊಸ ಉದ್ಯೋಗ ಸಿಗುವ ಪ್ರಮಾಣ ಶೇ.7ರಷ್ಟು ಅಧಿಕ. ಕೇವಲ ಆರಂಭಿಕ ಉದ್ಯೋಗ ಪಡೆಯುವವರಿಗೆ ಮಾತ್ರ ವಲ್ಲ, ಜೂನಿಯರ್‌ ಹಂತದ ಉದ್ಯೋಗ ಪಡೆಯು ವವರಿಗೂ ಹೆಚ್ಚಿನ ಅವಕಾಶಗಳಿವೆ.

1 ಲಕ್ಷ ಮಂದಿ ನೇಮಕ: ಅಮೆರಿಕದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್‌ ಪ್ರಸಕ್ತ ವರ್ಷ 1 ಲಕ್ಷ ಮಂದಿ ಅನುಭವಿ ವೃತ್ತಿಪರರನ್ನು ನೇಮಕ ಮಾಡಲು ಮುಂದಾಗಿದೆ. ಕಂಪೆನಿಯ ಒಟ್ಟು ಉದ್ಯೋಗಿಗಳ ಪೈಕಿ ಭಾರತದಲ್ಲಿಯೇ ಮೂರ ನೇ ಎರಡರಷ್ಟು ಮಂದಿ ಇದ್ದಾರೆ. ಈ ಬಗ್ಗೆ ಮಾತನಾಡಿದ ಸಂಸ್ಥೆಯ ಸಿಇಒ ಬ್ರೈನ್‌ ಹಂಫೈರ್‌ “ಪ್ರಸಕ್ತ ವರ್ಷ 1 ಲಕ್ಷ ಮಂದಿಯನ್ನು ನೇಮಿಸಿಕೊಳ್ಳುವುದರ ಜತೆಗೆ 1 ಲಕ್ಷ ಮಂದಿ ಹಾಲಿ ಉದ್ಯೋಗಿಗಳಿಗೆ ತರಬೇತಿ ನೀಡಲಾಗು ತ್ತದೆ. ಇದಲ್ಲದೆ, 30 ಸಾವಿರ ಹೊಸತಾಗಿ ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿದವರನ್ನು, 2022ರಲ್ಲಿ 45 ಸಾವಿರ ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ ನೀಡಲು ಮುಂದಾಗಿದ್ದೇವೆ’ ಎಂದಿದ್ದಾರೆ.

ಬೆಂಗಳೂರಲ್ಲೇ ಹೆಚ್ಚು  :

ಸಮೀಕ್ಷೆಯಲ್ಲಿ ಕಂಡುಬಂದ ಪ್ರಧಾನ ಅಂಶವೆಂದರೆ, ಬೆಂಗಳೂರಿನಲ್ಲೇ ಶೇ.60ರಷ್ಟು ಪ್ರಮಾಣದಲ್ಲಿ ನೇಮಕವಾಗಲಿದೆ. ಸಮೀಕ್ಷೆಯಲ್ಲಿ ಆಯ್ದುಕೊಂಡ ಐದು ನಗರಗಳ ಪೈಕಿ ಉದ್ಯಾನನಗರಿಗೇ ಹೆಚ್ಚಿನ ಅಂಕಗಳು ಬಂದಿವೆ. ಹೊಸದಿಲ್ಲಿÉಯಲ್ಲಿ ಶೇ.51, ಹೈದರಾಬಾದ್‌ನಲ್ಲಿ ಶೇ.41, ಚಂಡೀಗಢ ಶೇ.39, ಮುಂಬಯಿಯಲ್ಲಿ ಶೇ.37ರಷ್ಟು ನೇಮಕವಾಗಲಿದೆ.

Advertisement

ಯಾವ ಕ್ಷೇತ್ರಗಳಲ್ಲಿ? :

ಶೇ.60- ಆರೋಗ್ಯ ಮತ್ತು ಔಷಧೋದ್ಯಮ

ಶೇ.58- ಮಾಹಿತಿ ತಂತ್ರಜ್ಞಾನ

ಶೇ.53- ಇ-ಕಾಮರ್ಸ್‌ ಮತ್ತು ಟೆಕ್ನಾಲಜಿ ಸ್ಟಾರ್ಟಪ್‌

ಶೇ.51- ಗ್ರಾಹಕೋಪಯೋಗಿ ವಸ್ತುಗಳು

ಶೇ.50- ಕೃಷಿ ಮತ್ತು ಅದಕ್ಕೆ ಸಂಬಂಧಿತ ಕ್ಷೇತ್ರಗಳು

ಶೇ.48- ರಿಟೇಲ್‌

ಶೇ.44- ಸರಕು ಸಾಗಣೆ

ಶೇ.42- ದೂರಸಂಪರ್ಕ

Advertisement

Udayavani is now on Telegram. Click here to join our channel and stay updated with the latest news.

Next