Advertisement
ಸೋಂಕು ಪ್ರಸರಣ ಸದ್ಯ ತೀವ್ರವಾಗಿರುವ ಮುಂಬಯಿ, ದಿಲ್ಲಿ, ಬಿಲ್ವಾರಾ ಮತ್ತು ಆಗ್ರಾಗಳಲ್ಲಿ ಆರಂಭದಲ್ಲಿ ಈ ತಂತ್ರಗಾರಿಕೆಯನ್ನು ಪ್ರಯೋಗಿಸಲಾಗುತ್ತದೆ. ಬಳಿಕ ಬೆಂಗಳೂರು, ಮೈಸೂರು, ಪುಣೆ, ಕೇರಳ ಸೇರಿದಂತೆ ಇನ್ನೂ ಕೆಲವೆಡೆ ಇದೇ ಮಾದರಿಯ ಕ್ಲಸ್ಟರ್ ನಿಯಂತ್ರಣ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಮಾರ್ಟ್ ಸಿಟಿಗಳಲ್ಲಿ ತಂತ್ರಜ್ಞಾನ ಬಳಸಿ ಕೋವಿಡ್ 19 ಪ್ರಸಾರಕ್ಕೆ ಬ್ರೇಕ್ ಹಾಕಲಾಗುತ್ತದೆ. ನಿಗಾ ವಹಿಸುವುದು, ಟ್ರಾÂಕಿಂಗ್, ಕ್ವಾರಂಟೈನ್‌ನಲ್ಲಿ ಇರುವವರ ನಿರ್ವಹಣೆ, ಹೀಟ್ ಮ್ಯಾಪ್ ಬಳಸಿ ವಿಶ್ಲೇಷಣೆ, ಟೆಲಿಮೆಡಿಸಿನ್ ಮತ್ತು ಆಪ್ತ ಸಮಾಲೋಚನೆ ಇತ್ಯಾದಿ ಪ್ರಕ್ರಿಯೆಗಳಿಗೆ ತಂತ್ರಜ್ಞಾನಗಳ ನೆರವು ಪಡೆಯಲಾಗಿದೆ ಎಂದೂ ಅಗರ್ವಾಲ್ ತಿಳಿದ್ದಾರೆ. ಏನಿದು ಕ್ಲಸ್ಟರ್ ತಂತ್ರಗಾರಿಕೆ?
ಪ್ರದೇಶದಲ್ಲಿ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರದ ಎಲ್ಲ ಹಾದಿಗಳನ್ನು ಮುಚ್ಚುವುದು ಪ್ರಮುಖ ಅಂಶ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಎಲ್ಲರ ಮೇಲೆ ನಿಗಾ, ಎಲ್ಲ ಶಂಕಿತರ ಪರೀಕ್ಷೆ, ಐಸೋಲೇಶನ್, ಸಂಪರ್ಕಿತರನ್ನೂ ಪ್ರತ್ಯೇಕವಾಗಿಡುವುದು, ಜಾಗೃತಿ ಮೂಡಿಸುವ ಕೆಲಸ ಮಾಡುವುದು ಇನ್ನಿತರ ಅಂಶಗಳಾಗಿವೆ.
Related Articles
ರಾಜಸ್ಥಾನದ ಬಿಲ್ವಾರಾದಲ್ಲಿ ಈ ತಂತ್ರಗಾರಿಕೆ ಯಶಸ್ವಿಯಾಗಿದೆ. ಇಲ್ಲಿ ಮಾ.30ರಂದು 26 ಪ್ರಕರಣಗಳಿದ್ದವು. ಕೂಡಲೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಮನೆ ಮನೆಗೆ ಆಹಾರ ಧಾನ್ಯ, ಬೇಯಿಸಿದ ಆಹಾರವನ್ನೂ ಕೊಡಲಾಯಿತು. ಜನರನ್ನು ರಸ್ತೆಗಿಳಿಯ ಲು ಬಿಡಲೇ ಇಲ್ಲ. ಶಂಕಿತರನ್ನು ಕಂಡುಹಿಡಿದು ತ್ವರಿತವಾಗಿ ಪರೀಕ್ಷೆಗೊಳಪಡಿಸಲಾಯಿತು. ಹೀಗಾಗಿ ಇಲ್ಲಿ ಆ ಬಳಿಕ ಯಾವುದೇ ಕೇಸ್ ಕಾಣಿಸಿಕೊಂಡಿಲ್ಲ.
Advertisement